ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಕೆಲಸ ಸರ್ಕಾರದ್ದು: ಫೋಟೋ ಮಂತ್ರಿಯದ್ದು

Mainashree
Updated On : 24 Apr 2014, 10:49 am

ಯಾವುದೇ ಸರ್ಕಾರದ ಸಮಾರಂಭವೇ ಆಗಲಿ, ಅದಕ್ಕೆ ಪ್ರಚಾರ ಮಾಡಲು ಮಾಧ್ಯಮದಲ್ಲಿ ಪ್ರಕಟವಾಗುವ ಜಾಹೀರಾತುಗಳಲ್ಲಿ ಮಿಂಚುವುದು ಮಂತ್ರಿಗಳ ಚಿತ್ರಗಳೇ. ಆ ಜಾಹೀರಾತನ್ನು ಸಿದ್ಧಪಡಿಸುವುದೂ ಸರ್ಕಾರದ ಒಂದು ಇಲಾಖೆಯ ಸೂಚನೆಯಂತೆಯೇ.
ಈ ಜಾಹೀರಾತುಗಳಿಗೆ ವಿಪರೀತ ಹಣ ಖರ್ಚಾಗುವುದೂ ನಿಜ. ಸರ್ಕಾರದ ವೆಚ್ಚದಲ್ಲಿ ವೈಯಕ್ತಿಕ ರಾಜಕೀಯ ಉದ್ದೇಶದ ಪ್ರಚಾರವನ್ನು ನಿಷೇಧಿಸಬೇಕೆನ್ನುವ ಮನವಿಯನ್ನು ಸುಪ್ರೀಮ್ ಕೋರ್ಟಿಗೆ ಎರಡು ಸಂಘಟನೆಗಳು ಸಲ್ಲಿಸಿದ್ದವು.
ಸುಪ್ರೀಮ್ ಕೋರ್ಟ್ ಆ ಮನವಿದಾರರ ಅಭಿಪ್ರಾಯವನ್ನು ತಾತ್ವಿಕವಾಗಿ ಒಪ್ಪಿದೆ. ವೈಯಕ್ತಿಕ ರಾಜಕೀಯ ಪ್ರಚಾರಕ್ಕೆ ಸಾರ್ವಜನಿಕ ಹಣದ ಬಳಕೆ ಸರಿಯಲ್ಲ ಎನ್ನುವ ಭಾವನೆಯನ್ನು ಪ್ರಕಟಿಸಿದೆ.
ಆದರೆ ಸರ್ಕಾರದ ಯೋಜನೆಗಳು, ಸಮಾರಂಭಗಳಿಗೆ ಹಾಗಿದ್ರೆ ಪ್ರಚಾರವೇ ಬೇಡವೇ? ಹಾಗೆಂದು ಸುಪ್ರೀಮ್ ಕೋರ್ಟ್ ಹೇಳಿಲ್ಲ. ಆದರೆ, ಅಂತಹ ಸಂದರ್ಭಗಳಲ್ಲಿ ಸರ್ಕಾರ ಪ್ರಕಟಿಸುವ ಜಾಹೀರಾತುಗಳ ಸ್ವರೂಪ ಯಾವ ರೀತಿ ಇರಬೇಕು ಎನ್ನುವುದನ್ನು ಖಚಿತವಾಗಿ ಹೇಳುವುದು ಅಸಾಧ್ಯವಾದ್ದರಿಂದ ಆ ವಿಚಾರದಲ್ಲಿ ಸೂಕ್ತ ರೀತಿಯ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಲು ನ್ಯಾಷನಲ್ ಲಾ ಸ್ಕೂಲ್ ಸಂಸ್ಥಾಪಕರಾದ ಎನ್.ಆರ್. ಮಾಧವ ಮೆನನ್ ಅವರ ಅಧ್ಯಕ್ಷತೆಯಲ್ಲಿ ಮೂವರ ಸಮಿತಿಯನ್ನು ರಚಿಸಿದೆ. ಈ ವಿಚಾರದಲ್ಲಿ ಭಿನ್ನಾಭಿಪ್ರಾಯಗಳು ಇರುವುದಕ್ಕೆ ಸಾಧ್ಯ. ಆದರೆ ಸಾರ್ವಜನಿಕರ ಹಣ ಖರ್ಚು ಮಾಡಿ, ವೈಯಕ್ತಿಕ ವಿಜೃಂಭಣೆಗೆ ಮುಂದಾಗುವುದನ್ನು ತಡೆಗಟ್ಟಲೇ ಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement