ಭೋಗದ ಬೀಗ
ಯೋಗಬಲ್ಲವನಿಗೆ ರೋಗವಿಲ್ಲ
ದೇಹಕ್ಕೊದಗಿದರೆ ವ್ಯಾಧಿ, ಮನಸಿಗಂಟಿದರೆ ಆಧಿ
ಜಡತೆಯಿಂದೊದಗುವ ಜಾಢ್ಯ
ಕರೆಯದೇ ಬರುವ ನೆಂಟ, ಆಲಸ್ಯದ ಭಂಟ
ಬಂದ ಮೇಲೆ ವಾಸಿ ಪಡಿಸುವುದಕ್ಕಿಂತ ಬರದೇ ಇರುವಂತೆ ತಡೆಯುವುದೇ ವಾಸಿ
ಆರೋಗಣೆ ಸರಿಯಾಗಿಲ್ಲದ್ದರ ಸೂಚಕ
ಖಗ ಮೃಗಗಳನ್ನೂ ಸುತ್ತಿಕೊಳ್ಳುವ ಆಭೋಗ
ಸೊಗ ಮೀರಿ ಸುರಿದಾಗ ಪಾಯಸ, ದೇಹಕ್ಕೊದಗುವ ಆಯಾಸ
ವ್ಯಾಯಾಮವಿಲ್ಲದ ದೇಹದ ಮತ್ತೊಂದು ಆಯಾಮ
ಸುಖಾ ಸುಮ್ಮನೇ ದೇಹದ ಸುಖವನ್ನು ನುಂಗಿ ನೊಣೆಯುವ ಅಸುಖ
ಬೇಡದ ಖಯಾಲಿ ಹತ್ತಿಸಿಕೊಂಡವರ ಹತ್ತಿರ ಸುಳಿಯುವ ಖಾಯಿಲೆ
ಬಾಯಿ ಬಯಸಿದ್ದನ್ನೆಲ್ಲ ಬೇಯಿಸಿ ತಿಂದಿದ್ದರ ಪರಿಣಾಮ
ಚಪಲ ಚೆನ್ನಿಗರಾಯರ ಚಾಪಲ್ಯದ ಫಲ
ಎಷ್ಟು ಉಪಚರಿಸಿದರೂ ಸಾಲದು ಈಕರೆಯದೇ ಬರುವ ಅತಿಥಿಗೆ
ವಿಶ್ವನಾಥ ಸುಂಕಸಾಳ