ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಇಲ್ಲೊಬ್ಬಳಿಗೆ ಮಳೆಗಾಲದಲ್ಲೂ ಮೈ ಬೆವರುವುದಲ್ಲ ಯಾಕೆ?

Vishwanath S
Updated On : 5 Feb 2014, 12:24 pm

ಜಗದೀಶ ಎಸ್. ಬೆಳಗಾವಿ, 8722444410
ಇಲ್ಲೊಬ್ಬಳಿಗೆ ಮಳೆಗಾಲದಲ್ಲೂ ಮೈ ಬೆವರುವುದಲ್ಲ ಯಾಕೆ?
ವಿರೋಧಪಕ್ಷಗಳು ಮಳೆ ಬರುವ ಮೊದಲೇ ಈ ವರ್ಷ ಬರಗಾಲ ಅಂತಾರಲ್ಲ ಅದಿಕ್ಕೇ!

ಫ್ಯಾಷನ್ ಡಿಸೈನರ್ ಮಧು, 9945737427
ಬೋನಿನ ಒಳಗೆ ಬೋಂಡ ಇಟ್ಟರೆ ಇಲಿ ಸುಲಭವಾಗಿ ಬಂದು ಬೀಳುತ್ತದೆ. ಚೆಲುವೆಯೊಬ್ಬಳು ಹೃದಯದೊಳಗೆ ಬಂದು ಬಂಧಿಯಾಗಲು ಏನು ಮಾಡಬೇಕು?
ನೀನು ಮೊದಲು ಬೋನಿನೊಳಗೆ ಹೋಗಲು ಸಿದ್ಧನಾಗಬೇಕು!

ಫ್ಯಾಷನ್ ಡಿಸೈನರ್ ಮಧು, 9945737427
ತುಂಬಿದ ಎದೆಯ ಮೈ ಮೆರವಣಿಗೆ ಮಾಡಿದ ವಿದ್ಯಾಬಾಲನ್ ಇನ್ನುಮುಂದೆ ಸಣ್ಣ ಬ್ಲೌಸ್ ಹಾಕುವುದಿಲ್ಲವಂತೆ?
ಎದೆತುಂಬಿ ನಟಿಸಿದೆನು ಅಂದು ನಾನು, ಕಣ್ಣು ಮುಚ್ಚದೇ ನೋಡಿದಿರಿ ಅಂದು ನೀವು!

ಜಯಶ್ರೀ ಅಬ್ಬಿಗೇರಿ, ರಾಮದುರ್ಗ, ಬೆಳಗಾವಿ
ಹಲವು ಬಾರಿ ಓದಿದರೂ ನೆನಪಿರೊಲ್ಲ, ಒಂದೇ ಬಾರಿ ನೋಡಿದರಪೂ ಸುಂದರವಾದ ಹುಡುಗಿಯ ನೆನಪು ಹಾರಾಕ ಆಗಲ್ಲ ಯಾಕೆ?
ಅದಿಕ್ಕೇ ಕೆಲವರು ಪುಸ್ತಕದ ನಡುವೆ ಸುಂದರ ಹುಡುಗಿಯ ಫೋಟೊ ಇಡೋದು!

ತಲವಾಟ ಮಂಜುನಾಥ, ಸಾಗರ, 9480931611
ಹೆಂಗಸರು ಹೆಚ್ಚಾಗಿ ಟಿವಿ ಧಾರಾವಾಹಿಗಳಿಗೆ ಅಂಟಿಕೊಳ್ಳಲು ಕಾರಣವೋನು?
ಗಂಡನ ಮೇಲೆ ಸೆಡುತೀರಿಸಿಕೊಳ್ಳುವ ಇನ್ನೊಂದು ವಿಧಾನವಿದು.


 -ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement