ಈ ದೇಶ ಚೆನ್ನ, ಈ ಮಣ್ಣು ಚೆನ್ನ ಅಂತ ಹೇಳ್ಕೊಂಡು...
ಕಾಲ್‌ಸೆಂಟರ್ ಶಿವಕುಮಾರ, ನಂಜಾಪುರ, ರಾಮನಗರ
ಈ ದೇಶ ಚೆನ್ನ, ಈ ಮಣ್ಣು ಚೆನ್ನ ಅಂತ ಹೇಳ್ಕೊಂಡು ಮಣ್ಣನ್ನೇ ಕಾಲಿ ಮಾಡ್ತಿದಾರಲ್ಲ?
ನಿಜವಾದ ಮಣ್ಣಿನ ಮಕ್ಕಳು ಅಂದ್ರೆ ಅವ್ರೇ ನೋಡಿ!
ಫ್ಯಾಷನ್ ಡಿಸೈನರ್ ಮಧು, 9945737427
ಪ್ರೀತಿಸುವ ಹೊಸಜೀವ ಹತ್ತಿರ ಬಂದಾಗಲೂ, ಹಳೆಯ ಪ್ರೀತಿಯನ್ನು ನೆನಪಿಸಿಕೊಳ್ಳುವುದು ಮೂರ್ಖತನ ಅಲ್ವಾ?
ಅವರ ಪಾಲಿಗೆ ಎಲ್ಲವೂ ಓಲ್ಡ್ ಈಸ್ ಗೋಲ್ಡ್!
ಓಂಚನ್ನೇಶ್ ಅರಬಿಳಚಿಕ್ಯಾಂಪ್, ಭದ್ರಾವತಿ, 9901257131
ಮನೆಗೆ ಬಾಗಿಲಿದ್ದಂತೆ ಹೃದಯಕ್ಕೆ ಬಾಗಿಲಿದ್ದಿದ್ದರೆ?
ಹೃದಯಕ್ಕೂ ಕವಾಟಗಳಿವೆ. ಆದರೆ ಅದು ಆಟೋಮೆಟಿಕ್!
ಸಿ.ನಾಗರಾಜ, ಅರದೋಟ್ಲು, ಭದ್ರಾವತಿ
ಸ್ಮಶಾನದಲ್ಲಿದ್ದ ಸಮಾಧಾನ ಮನೆಗೆ ಬಂದಾಗ ಇರುವುದಿಲ್ಲ ಏಕೆ?
ಮನೆಯಲ್ಲಿ ಸಮಾಧಾನ ಇರಬೇಕೇ ಹೊರತು, ಸಮಾಧಾನ ಇದ್ದಲ್ಲಿ ಮನೆ ಕಟ್ಟಲು ಆಗುವುದಿಲ್ಲ!
ಚಿರಪ್ರಭ ನಂಜನಗೂಡು, 8553793107
ಕೈಪಕ್ಷದ ಉಪಾಧ್ಯಕ್ಷರ ಮೊದಲ ಸಂದರ್ಶನವನ್ನು ಯಾವುದಕ್ಕೆ ಹೋಲಿಸಬಹುದು?
ಪ್ರಥಮ ಸಂದರ್ಶನೇ ದಂತ ಭಗ್ನಂ!
-ಬಾಣಭಟ್ಟ