ಒಬ್ಬ ಹುಡುಗಿ ಮುಖಕ್ಕೆ ದುಪಟ್ಟಾ ಸುತ್ತಿಕೊಂಡು ಸ್ಕೂಟಿ...
ಒಬ್ಬ ಹುಡುಗಿ ಮುಖಕ್ಕೆ ದುಪಟ್ಟಾ ಸುತ್ತಿಕೊಂಡು ಸ್ಕೂಟಿ ಮೇಲೆ ಹೊರಟಿದ್ದಳು. ಅವಳನ್ನು ನೋಡಿದ್ದೇ ಪೋಲಿ ಪಾದಾಚಾರಿಯೊಬ್ಬ ಕೂಗಿದ: "ಸ್ವಲ್ಪ ಮುಖಾನಾದ್ರೂ ತೋರ್ಸಿ ಹೋಗು ಜಾನೇಮನ್!"
ಹುಡುಗಿ: ಅಪ್ಪ ನಾನು ಪಿಂಕಿ!
***
ಹುಡುಗಿಯ ಕುಟುಂಬದವರು ಹೇಳುವುದು: ಹುಡುಗನ ಕುಟುಂಬ ಚೆನ್ನಾಗಿರಬೇಕು. ಹುಡುಗ ಸಂಸ್ಕಾರಿಯಾಗಿರಬೇಕು.
ಅವರ ಮನಸ್ಸು ನಿಜವಾಗಲೂ ಹೇಳುವುದು: ನಮಗಿಂತ ಶ್ರೀಮಂತ ಕುಟುಂಬದವನಿರಬೇಕು!
***
ತಿಮ್ಮ: ಲೋ ಕೋಲ್ಯ, ಪ್ರೇಮಿಗಳ ದಿನದಂದು ನಿನ್ನ ಅತ್ತಿಗೆಗೆ ಒಳ್ಳೆ ಗಿಫ್ಟ್ ಕೊಡಬೇಕು ಅನ್ಕೊಂಡಿದೀನಿ. ಏನು ಕೊಡ್ಲಿ ಹೇಳೋ? ಅದು ಅವಳ ಹೃದಯಕ್ಕೇ ತಾಗುವಂತಿರಬೇಕು...
ಕೋಲ್ಯ: ಗುಂಡು ಹೊಡಿ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.