ಹುಡುಗ-ಹುಡುಗಿಯರಲ್ಲಿ ಲವ್ ಹುಟ್ಟಲು ಔಷಧಿ ಇದೆಯೇ?
ತಲವಾಟ ಮಂಜುನಾಥ, ಸಾಗರ, 9480931611
ಹುಡುಗ-ಹುಡುಗಿಯರಲ್ಲಿ ಲವ್ ಹುಟ್ಟಲು ಔಷಧಿ ಇದೆಯೇ?
ಲವ್ ಹುಟ್ಟೋದಕ್ಕೇ ಔಷಧಿ ಬೇಕು ಅಂದ್ರೆ ಮುಂದಿಂದೆಲ್ಲ ಹೇಗೆ ಮಾರಾಯಾ?
ಐಗೂರು ರವಿಪ್ರಿಯ, ಕೊಡಗು, 9483111096
ನಮ್ಮ ರಾಜ್ಯ ಸರ್ಕಾರದಿಂದ ಒಂದು ರುಪಾಯಿ ಕೆಜಿ ಅಕ್ಕಿ ಪಡೆದು, ಕೇಂದ್ರ ಸರ್ಕಾರ ನೀಡುವ ಸಾವಿರಾರು ರುಪಾಯಿಯ 'ಗ್ಯಾಸ್'ನಲ್ಲಿ ಅಡುಗೆ ಮಾಡುವುದು ಹೇಗೆ?
ಬಲಗೈಯಲ್ಲಿ ಕೊಟ್ಟು ಎಡಗೈಯಲ್ಲಿ ಇಸ್ಕೊಳ್ಳೋದು ಅಂದ್ರೆ ಇದೇ ನೋಡಿ.
ಹರಳಹಳ್ಳಿ ಪುಟ್ಟರಾಜು, ಪಾಂಡವಪುರ, 9632838088
ಸಾಹಿತಿಗಳೆಲ್ಲ ಲೇಖಕಿಯರನ್ನೇ ಮದುವೆಯಾಗಿದ್ದರೆ?
ಸಾಹಿತ್ಯ ಲೋಕದಲ್ಲೂ ಕುಟುಂಬ ರಾಜಕಾರಣ
ಕಾಣಿಸಿಕೊಳ್ಳುತ್ತಿತ್ತು.
ಸಿ. ನಾಗರಾಜ ಅರದೋಟ್ಲು, ಭದ್ರಾವತಿ
ಶಿಲ್ಪಿಯ ಆತ್ಮ ಕುಂಚ. ಸಂಸಾರದ ಆತ್ಮ?
ಮಂಚ!
ತಲವಾಟ ಮಂಜುನಾಥ, ಸಾಗರ, 9480931611
ನನ್ನನ್ನು ಪ್ರೇಮಿಸಿ ಮೋಸ ಮಾಡಿದ ಹುಡುಗಿ ಬರುವ ದೀಪಾವಳಿಗೆ ಏನಾದರೂ ಆಫರ್ ಕೊಡಬಹುದೇ?
ಮದುವೆ ದಿನ ಬಂದು ಪಟಾಕಿ ಹೊಡೆಯದಿದ್ದರೆ ಸಾಕು!
-ಬಾಣಭಟ್ಟ