ಪ್ರೇಮಕುಮಾರಿಗೂ, ಕನ್ಯಾಕುಮಾರಿಗೂ ಏನು ವ್ಯತ್ಯಾಸ?
ಎಂ. ರವೀಂದ್ರನಾಯಕ್, ಪರ್ಕಳ, ಉಡುಪಿ
ಪ್ರೇಮಕುಮಾರಿಗೂ, ಕನ್ಯಾಕುಮಾರಿಗೂ ಏನು ವ್ಯತ್ಯಾಸ?
ಹಲವರಿಗೆ ಪ್ರೇಮಕೊಟ್ಟೂ ಕುಮಾರಿಯಂತೆ ನಟಿಸುವವರನ್ನು ಪ್ರೇಮಕುಮಾರಿ ಎನ್ನಬಹುದು.
ಪುಟ್ಟಸೋಮನಹಳ್ಳಿ ಗಾನಾಸುಮಾ, ಮಂಡ್ಯ, 8762273686
ಕಾಡಿನ ಪ್ರಾಣಿಗಳು ವಿಧಾನಸೌಧಕ್ಕೆ ದಾಳಿಯಿಡೋ ಕಾಲ ದೂರವಿಲ್ಲ ಅನ್ಸುತ್ತೆ?
ಅದಕ್ಕಿಂತ ಮೊದಲು ನಾಡಿನ ಪ್ರಾಣಿಗಳ ದಾಳಿ ತಡೆಯಲು ಖೆಡ್ಡಾ ತೋಡಿಸಿ ಎಂಬ ಒತ್ತಾಯವಿದೆ.
ಪುಟ್ಟಸೋಮನಹಳ್ಳಿ ಗಾನಾಸುಮಾ, ಪಾಂಡವಪುರ, ಮಂಡ್ಯ
ಅಂದು ರೇಣುಕಾ, ನಡುವೆ ಹಾಲಪ್ಪನ ಹಾಲಾಹಲ, ಇಂದು ಪ್ರೇಮದಾಸ ಚರಿತ್ರೆ. ಮುಂದೆ?
ಕಾಶೀನಾಥರ ಅನುಭವ!
ಜಗದೀಶ್. ಎಸ್. ಬೆಳಗಾವಿ, 8722444410
ಹುಡುಗಿಯರು ನಖರಾ ಮಾಡಲು ಕಾರಣವೇನು?
ಬಕರಾಗಳು ಬಲೆಗೆ ಬೀಳಲಿ ಅಂತ!
ಕಾಳಿಹುಂಡಿ ಶಿವಕುಮಾರ್ 9844883581
ನಿಶ್ಚಿಂತೆಯಾಗಿ ಬದುಕಲು ನಮ್ಮ ಜನ ಹಿಂದೆ- ಮುಂದೆ ನೋಡುವುದೇಕೆ?
ಚಿಂತೆ ಮಾಡದೇ ಹೋದರೂ ಏನಾದರೂ ಕಳೆದುಕೊಳ್ಳುವ ಆತಂಕವಿದೆಯೇನೋ ಎಂಬ ಚಿಂತೆ!