ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಬಾರೋ ಲಡ್ಕ, ಸ್ವಲ್ಪ ತಡ್ಕ ತಾಳಿ ಕಟ್ಟೋ ತನ್ಕ ಅಂತಾಳಲ್ಲ?

Mainashree
Updated On : 21 Feb 2014, 10:34 am

ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ಮದುವೆಯಾದ ಹೊಸತರಲ್ಲಿ ಕೈಕೈ ಹಿಡಿದು ಸಾಗುವ ನವದಂಪತಿಗಳು, ನಂತರ ಹಾಗೆ ಮಾಡೋದಿಲ್ಲವಲ್ಲ?
ಕೈ ಕೈ ಮಿಲಾಯಿಸದಿದ್ದರೆ ಸಾಕು!

ವಿ. ಹೇಮಂತಕುಮಾರ, ಬೆಂಗಳೂರು, 9035992900
ಬಾರೋ ಲಡ್ಕ, ಸ್ವಲ್ಪ ತಡ್ಕ ತಾಳಿ ಕಟ್ಟೋ ತನ್ಕ ಅಂತಾಳಲ್ಲ?
ಬಾರೋ ಲಡ್ಕ, ಈಗ ಸ್ವಲ್ಪ ತಡ್ಕ, ಆ ಮೇಲೆ ಎಷ್ಟುಬೇಕಾದ್ರೂ ಹಿಡ್ಕ ಅಂದಿದ್ರೆ ಡುಂಡಿರಾಜ್‌ರನ್ನೂ ಮೀರಿಸುವ ಕವನ ಆಗ್ತಿತ್ತು!

ಹೇಮಂತಕುಮಾರ
ಮನಸು ಒಂದಾದ ಮೇಲೆ ದೇಹಗಳು ಒಂದಾಗಲೇಬೇಕೇ?
ಅವೆರಡೂ ಒಂದಾದ ಮೇಲೆ ಮೂರಾಗಲೇ ಬೇಕು ಎಂಬುದು ಪ್ರಕೃತಿ ನಿಯಮ!

ಕಾಲ್‌ಸೆಂಟರ್ ಶಿವಕುಮಾರ, ರಾಮನಗರ
ಸತ್ಯವಾನ್ ಸಾವಿತ್ರಿಯವರ ಮಧುರ ಸಂಗಮವೇ ಸತ್ಯಯುಗದ ಸಾವಿತ್ರಿಯೇ?
ನನಗೆ ಯಾವುದೇ ಸಾವಿತ್ರಿಯ ಪರಿಚಯವಿಲ್ಲ ಅಂತ ಚುಂಬನಾಚಾರ್ಯರು ಸ್ಪಷ್ಟೀಕರಣ ನೀಡಿದ್ದಾರೆ.

ಸಿ. ನಾಗರಾಜ, ಅರದೋಟ್ಲು, ಭದ್ರಾವತಿ
ಸ್ತ್ರೀಯು ನಲವತ್ತಕ್ಕೆ ಅಜ್ಜಿ ಎನ್ನುತ್ತಿದ್ದರು. ಈಗ ಅನೇಕರು ಮದುವೆಯೇ ಆಗಿರುವುದಿಲ್ಲವಲ್ಲಾ?
ಅಜ್ಜಿಗೆ ಮದುವೆ ಆಗಿರಲೇಬೇಕೆಂಬ ಕಡ್ಡಾಯವಲ್ಲ.


 ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement