ಪ್ರೇಮಿಗಳನ್ನು 'ಲವ್ ಬರ್ಡ್ಸ್' ಎಂದೇಕೆ ಕರೆಯುತ್ತಾರೆ?
ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ಪ್ರೇಮಿಗಳನ್ನು 'ಲವ್ ಬರ್ಡ್ಸ್' ಎಂದೇಕೆ ಕರೆಯುತ್ತಾರೆ?
ಹಾರಿ ಹೋಗುವ ಸಾಧ್ಯತೆ ಜಾಸ್ತಿ ಇರುವುದರಿಂದ!
ಜಿ.ಎಂ. ರಾಜಶೇಖರ, ದಾವಣಗೆರೆ
ಟಿ.ವಿ. ಸೀರಿಯಲ್‌ನಲ್ಲಿ ಯಾಕೆ ನಿಕ್ಕರ್, ಬನಿಯನ್ ಸೂಟ್ ಕೇಸ್‌ನಲ್ಲಿ ಪ್ಯಾಕ್ ಮಾಡಲ್ಲ?
ಸದ್ಯ, ಟಾಯ್ಲೆಟ್‌ಗೆ ಹೋಗೋದು ಯಾಕೆ ತೋರ್ಸೋಲ್ಲ ಅಂತ ಕೇಳಲಿಲ್ಲವಲ್ಲ!
ಸಿ. ನಾಗರಾಜ, ಅರದೋಟ್ಲು ಭದ್ರಾವತಿ
ಹೆಣ್ಣಿನ ತುಟಿಗಳ ಸೌಂದರ್ಯದ ಮುಂದೆ ಗುಲಾಬಿ ಏನು?
ಏನೇನೂ ಅಲ್ಲ ಅನ್ನುವುದರಲ್ಲೇ ಲಾಭವಿದೆ!
ಓಂ ಚನ್ನೇಶ, ಅರಬಿಳಚಿ ಕ್ಯಾಂಪ್
ಬಾಯಿ ಮುಚ್ಚಿ ನಗುವವನಿಗೂ, ಹಲ್ಲು ಕಿರಿದು ನಗುವವನಿಗೂ ವ್ಯತ್ಯಾಸವೇನು?
ಬಾಯಿ ಮುಚ್ಚಿ ನಗುವವನಿಗೆ ಹಲ್ಲು ಉದುರಿಸಿಕೊಳ್ಳುವ ಅಪಾಯವಿರುವುದಿಲ್ಲ!
ಚಿರಪ್ರಭ, ನಂಜನಗೂಡು, 8553793107
ನಿವೃತ್ತರಾದ ಮೇಲಾದರೂ ಸಿಂಗ್ ಮೌನ ಮುರಿಯುವರೇ?
ಆಗ ಮಾತನಾಡಿ ಏನು ಉಪಯೋಗ?!
ಬಾಣಭಟ್ಟ