ಭಾರತೀಯ ಚಿತ್ರರಂಗ ನಮಗೆ ಕಲಿಸಿದ ಪಾಠಗಳು:
ಭಾರತೀಯ ಚಿತ್ರರಂಗ ನಮಗೆ ಕಲಿಸಿದ ಪಾಠಗಳು:
ಅವಳಿ ಮಕ್ಕಳು ಹುಟ್ಟಿದರೆ ಅವರಲ್ಲಿ ಒಬ್ಬ ಪೊಲೀಸಾಗುತ್ತಾನೆ, ಇನ್ನೊಬ್ಬ ಕಳ್ಳ!
ಗೂಂಡಾಗಳಿಂದ ಏಟು ತಿನ್ನುವಾಗ ಹೀರೋಗೆ ನೋವಾಗುವುದಿಲ್ಲ. ಆದರೆ ಹೀರೋಯಿನ್ ಆ ಗಾಯವನ್ನು ತೊಳೆಯುವಾಗ ಆಗುತ್ತದೆ!
ಹೀರೋ ಡ್ಯಾನ್ಸ್ ಮಾಡಲು ನಿರ್ಧರಿಸಿದರೆ, ಊರಿಗೆ ಊರೇ ತಮ್ಮ ಕೆಲಸಬೊಗಸೆ ಬಿಟ್ಟು ಅವನೊಟ್ಟಿಗೆ ಹೆಜ್ಜೆ ಹಾಕುತ್ತದೆ
ಫೈಟ್ ಸೀನ್ ನಡೆಯುವಲ್ಲಿ ಕಡ್ಡಾಯವಾಗಿ ತರಕಾರಿ, ಕುಂಕುಮದ ಬಂಡಿಗಳು, ಮಡಕೆಗಳು ಇರಲೇಬೇಕು!
ಬಡ ಹೀರೋಗೆ ಊಟ ಮಾಡಲು ಹಣವಿರುವುದಿಲ್ಲ, ಆದರೆ ಡ್ಯಾನ್ಸ್ ಮಾಡಲು ಸ್ವಿಜರ್ಲೆಂಡ್, ಸಿಂಗಾಪುರಕ್ಕೆ ಹೋಗುವ ಶಕ್ತಿಯಿರುತ್ತದೆ!
----
ಕೋಲ್ಯ ತನ್ನ ಹೆಂಡತಿಯನ್ನು ಕೊಂದು ಬಿಟ್ಟ. ಆ ಸಮಯದಲ್ಲಿ ಅವನ 10 ವರ್ಷದ ಮಗು ಮಲಗಿತ್ತು. ವಿಚಿತ್ರವೆಂದರೆ ಮೂರು ದಿನವಾದರೂ ತನ್ನ ತಾಯಿ ಎಲ್ಲಿದ್ದಾಳೆಂದು ಆ ಮಗು ಕೇಳಲಿಲ್ಲ. ಕೋಲ್ಯನಿಗೆ ಯಾಕೋ ಅನುಮಾನ ಶುರುವಾಯಿತು...
ಕೋಲ್ಯ: ಮೂರು ದಿನದಿಂದ ನೀನು ಏನೋ ಕೇಳ್ಬೇಕು ಅನ್ಕೊಳ್ತಾ ಇದೀಯ, ಏನು ಹೇಳು?
ಮಗ: ಅಪ್ಪ, ಅಮ್ಮ ಯಾಕೆ ಮೂರು ದಿನದಿಂದ ನಿನ್ನ ಹಿಂದೇನೇ ಅಡ್ಡಾಡ್ತಿದಾಳೆ?
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.