ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಕ್ರೇಜಿಸ್ಟಾರ್‌ಗೂ ಕ್ರೇಜಿವಾಲ್‌ಗೂ ಏನು ವ್ಯತ್ಯಾಸ?

Mainashree
Updated On : 26 Feb 2014, 10:14 am

ಆರ್.ಸಿ.ಪರಶುರಾಮ, ಶಿಕಾರಿಪುರ, 9902203492
ಕ್ರೇಜಿಸ್ಟಾರ್‌ಗೂ ಕ್ರೇಜಿವಾಲ್‌ಗೂ ಏನು ವ್ಯತ್ಯಾಸ?
ಒಬ್ಬರು ಬುರುಡೇ, ಬುರುಡೆ.. ಎಂಬ ಹಾಡಿಗೆ ನಟಿಸಿದವರು, ಇನ್ನೊಬ್ಬರು ಅದನ್ನು ರಿಯಲ್ಲಾಗಿ ಸಾಬೀತು ಮಾಡಿದವರು!

ಫ್ಯಾಷನ್ ಡಿಸೈನರ್ ಮಧು, 9945737427
ಸ್ನಾನ ಮಾಡುವಾಗ ನೆನಪಾಗುವ ರೊಮ್ಯಾಂಟಿಕ್ ಹಾಡುಗಳು ರಾತ್ರಿ ಮಲಗಿದಾಗ ನೆನಪಾಗುವುದಿಲ್ಲವೇಕೆ?
ಮಲಗಿದಾಗ ಹಾಡಿದರೆ ಪಕ್ಕದ ಮನೆಯವರಿಂದ ಒದೆ ತಿನ್ನಬೇಕಾಗುತ್ತದೆ ಎಂಬ ಕಾರಣಕ್ಕೆ!

ಸಿ. ನಾಗರಾಜ ಅರದೋಟ್ಲು, ಭದ್ರಾವತಿ
ಡಬ್ಬಿಂಗ್ ಚಳವಳಿ ಯಾರ ವಿರುದ್ಧ ಎಂದು ತಿಳಿಯುತ್ತಿಲ್ಲವಲ್ಲ?
ಕನ್ನಡದ ಚಿತ್ರಗಳು ಡಬ್ಬಾದಲ್ಲೇ ಉಳಿದುಬಿಟ್ಟರೆ ಎಂಬ ಭಯದಿಂದ ಮಾತ್ರ!

ಆರ್.ಬಿ. ಚಂದ್ರಶೇಖರ, ಕೆ.ಆರ್.ನಗರ
ರಾಜಕೀಯದಲ್ಲಿ ಮೂರೂ ಬಿಟ್ಟೋರು ದೊಡ್ಡವರಂತಲ್ಲ?
ಇದನ್ನು ತಪ್ಪಾಗಿ ಅರ್ಥ ಮಾಡಿಕೊಂಡು ಮೂರೂ ಪಕ್ಷ ಬಿಟ್ಟು ಸೈಕಲ್ ಏರಿದ್ದ ಯೋಗಿ ಸುಸ್ತಾಗಿದ್ದಾರೆ!

ಬರ್ಕಲಿರಮೇಶ, ಕಿರಗಂದೂರು, ಮಂಡ್ಯ, 9008741348
ವಿಜ್ಞಾನ ಇಷ್ಟೊಂದು ಮುಂದುವರಿದಿದ್ದರೂ ಕೆಲವರು ಅಜ್ಞಾನಿಗಳಂತೆ ವರ್ತಿಸುತ್ತಾರಲ್ಲ?
ವಿಜ್ಞಾನ ಮಾತ್ರ ಮುಂದುವರಿದಿದೆ ಅವರಲ್ಲ!

 ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement