ಕೆಲ ಮಹಿಳೆಯರು ಮಂಗಳಸೂತ್ರ ಕಾಣದಂತೆ ಬಟ್ಟೆ ಧರಿಸುತ್ತಾರಲ್ಲ?
ಸಿ. ನಾಗರಾಜ ಅರದೋಟ್ಲು, ಭದ್ರಾವತಿ
ಕೆಲ ಮಹಿಳೆಯರು ಮಂಗಳಸೂತ್ರ ಕಾಣದಂತೆ ಬಟ್ಟೆ ಧರಿಸುತ್ತಾರಲ್ಲ?
ಅದು ಅವರ ವಯಸ್ಸು ಮುಚ್ಚಿಡುವ ಸೂತ್ರ!
ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ಒಬ್ಬಳು ಒಳ್ಳೆಯವಳೆಂದು ತಿಳಿದುಕೊಳ್ಳಲು ಏನು ಮಾಡಬೇಕು?
ನಿಜಕ್ಕೂ ಒಳ್ಳೆಯವಳಾ ಎಂದು ಗೊತ್ತಾಗಬೇಕಾದರೆ ಮದುವೆಯೇ ಆಗಬೇಕು!
ನೆಲಮಂಗಲ ಮಹೇಶ
ಭಾರತದಲ್ಲಿನ ಅನೇಕ ಸಾಮಾಜಿಕ ಸಮಸ್ಯೆಗಳಿಗೆಲ್ಲ ಮೂಢನಂಬಿಕೆಯೇ ಕಾರಣವಂತೆ?
ಹಲವು ಮೂಢನಂಬಿಕೆಗಳಲ್ಲಿ ಇದೂ ಒಂದು!
ಚಿರಪ್ರಭ ನಂಜನಗೂಡು, 8553793107
ದೇಶಕ್ಕಾಗಿ ಬಿಜೆಪಿಯವರ ಮನೆಯ ಒಂದು ನಾಯಿ ಕೂಡ ಸತ್ತಿಲ್ಲ. ಕಾಂಗ್ರೆಸ್‌ನವರದು?
ಬೇರೆಯವರ ಮನೆ ನಾಯಿ ಸತ್ತಿದೆಯೋ ಇಲ್ಲವೋ ಎಂದು ನೋಡುವುದೇ ಕಾಯಕ!
ನಂದ ಯಡಿಯೂರು, 9880055196
- ಪಾಪ ಪುಣ್ಯ ಪುಸ್ತಕದ ಮೇಲೆ. ದುನಿಯಾ?
ಪರದೇ ಮೇಲೆ!
ಬಾಣಭಟ್ಟ