ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Mainashree
Updated On : 27 Feb 2014, 11:03 am

ಬೆಂಗಳೂರಿನಿಂದ ವಿ. ಹೇಮಂತಕುಮಾರ ಅವರು ಬರೆಯುತ್ತಾರೆ- 'ಫೆ.19ರ ಸಂಚಿಕೆಯ ಪುಟ 12ರಲ್ಲಿ ಕೆಲವು ತಪ್ಪುಗಳು ನುಸುಳಿವೆ. 'ಪ್ರಾಮಾಣಿಕತೆ ಮೆರೆದ ಆಟೋಚಾಲಕ' ಶೀರ್ಷಿಕೆಯ ಲೇಖನದಲ್ಲಿ, 'ಬ್ಯಾಂಕಿಗೆ ಹೋಗಿ ನೋಡಿದಾಗ ಬ್ಯಾಗ್ ಇಲ್ಲದಿರುವುದು ತಿಳಿದು ಕಂಗಾಲಾಗಿ ಹಣ ಹುಡುಕತೊಡಗಿದ್ದಾರೆ. ಆದರೆ ಆ ಸಂದರ್ಭದಲ್ಲಿ ಹಿಂಬದಿಯಿಂದ ಆಟೋ 'ತರುತ್ತಿದ್ದ' ನಾಗರಾಜ ದೇಸೂರ' ಎಂದು ಪ್ರಕಟವಾಗಿದೆ. ಆಟೋ ತರುತ್ತಿದ್ದ ಎಂಬುದಕ್ಕೆ ಬದಲಾಗಿ ಆಟೋದಲ್ಲಿ ಬರುತ್ತಿದ್ದ ಎಂಬುದು ಸೂಕ್ತವಲ್ಲವೇ?'
"ಬೋನಿಗೆ ಬಿತ್ತು ಬಾಲಕನ ಬಲಿ ಪಡೆದಿದ್ದ ಚಿರತೆ' ಶೀರ್ಷಿಕೆಯ ಲೇಖನದಲ್ಲಿ ಮರಿ ಚಿರತೆಯೊಂದು ಕಳೆದ ವಾರ ಬೋನಿಗೆ ಬಿದ್ದ ಸಂದರ್ಭದಲ್ಲಿಯೇ ಹೆಣ್ಣು ಚಿರತೆ ಬೋನಿನ ಬತ್ತಿರ ಬಂದು ಹೋಗಿದೆ ಎಂದಿದೆ. 'ಬತ್ತಿರ' ಎಂದರೇನು? ಹತ್ತಿರ ಇರಬೇಕಿತ್ತಲ್ಲವೇ? ಇನ್ನು ಪುಟ 14ರಲ್ಲಿ ಪ್ರಖ್ಯಾತ 'ಛಾಯಾಗ್ರಾಹಕ ಬಿ.ಎಸ್. ನಾಗರಾಜನ್ ನಿಧನ' ಶೀರ್ಷಿಕೆಯ ಲೇಖನದಲ್ಲಿ ನಾಗರಾಜನ್ ಅವರು ಮದ್ರಾಸ್‌ನಲ್ಲಿ ಬೆಳಗ್ಗೆ 10.40ಕ್ಕೆ ಕೊನೆಯುಸಿರೆಳೆದರು ಎಂದಿದೆ. ಲೇಖನದಲ್ಲಿ ಮದ್ರಾಸ್ ಎಂದು ಎರಡು ಕಡೆ ಪ್ರಕಟವಾಗಿದೆ. ಮದ್ರಾಸ್ ಎಂಬ ಹೆಸರು ಹೋಗಿ ಹಲವು ವರ್ಷಗಳಾದವು. ಮದ್ರಾಸ್ ಬದಲು ಚೆನ್ನೈ ಎಂದು ಪ್ರಕಟಿಸಬೇಕಿತ್ತಲ್ಲವೇ?'
'ಫೆ.22ರ ಸಂಚಿಕೆಯ ಪುಟ 7ರಲ್ಲಿ 'ರೈಗೆ ಗದರಿದ ಸ್ಪೀಕರ್‌' ಶೀರ್ಷಿಕೆಯ ಸುದ್ದಿಯಲ್ಲಿ ಸಚಿವರಾಗಿ ಏನು ಮಾತನಾಡಬೇಕು ಎಂದು ನಿಮಗೆ ಗೊತ್ತಿಲ್ಲವಲ್ರಿ? 'ಸರ್ಕಾರವಾಗಿ ಸಮಾಧಾನವಾಗಿ' ಉತ್ತರ ನೀಡಬೇಕು ಎಂದಿದೆ. ಸರ್ಕಾರವಾಗಿ ಸಮಾಧಾನವಾಗಿ ಎಂಬುದೇ ಅರ್ಥವಾಗಲಿಲ್ಲ. ಅರ್ಥವಾಗುವಂತೆ ತಿಳಿಸುವಿರಾ?'
'ಇನ್ನು ಪುಟ 10ರಲ್ಲಿ ಸಂಸತ್ತಿನಲ್ಲಿ ರಮ್ಯಾ ಚೊಚ್ಚಲ ಭಾಷಣ ಶೀರ್ಷಿಕೆಯ ಲೇಖನದಲ್ಲಿ 'ವಿದಿನೈದನೆಯ ಲೋಕಸಭೆಯ ಎಂದು ಪ್ರಕಟವಾಗಿದೆ. 'ವಿದಿನೈದನೆಯ' ಅಂದರೇನು. ಅದು ಹದಿನೈದನೆಯ ಲೋಕಸಭೆ ಎಂದಿರಬೇಕು ಅಲ್ಲವೇ? ಲೇಖನ ಮುಂದುವರೆದು ಪ್ರತಿಬಾರಿಯ ರೈತರಿಗೆ ಪ್ರತಿಫಲ ಸಿಗುವುದಿಲ್ಲ. ಕಬ್ಬಿಗೆ ಪ್ರತಿ ವರ್ಷ ಕನಿಷ್ಠ ಬೆಂಬಲ ನಿಗದಿ ಮಾಡುತ್ತದೆ ಎಂದಿದೆ. ಪ್ರತಿ ಬಾರಿಯು ರೈತರಿಗೆ ಪ್ರತಿಫಲ ಸಿಗುವುದಿಲ್ಲ. ಕಬ್ಬಿಗೆ ಪ್ರತಿ ವರ್ಷಕ್ಕೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡುತ್ತದೆ ಎಂದು ಹೇಳುವುದೇ ಸಮಂಜಸ ಅಲ್ಲವೇ?' ಎಂದಿದ್ದಾರೆ. 'ಸರ್ಕಾರವಾಗಿ ಸಮಾಧಾನವಾಗಿ' ಎಂಬುದು ವಿ. ಹೇಮಂತಕುಮಾರ್ ಅವರಿಗೆ ಅರ್ಥವಾಗಲಿಲ್ಲ ಎಂದರೆ ಅಚ್ಚರಿಯಾಗುತ್ತದೆ. ಸಚಿವರು ಅಂದರೆ ಸರ್ಕಾರ. ಅವರು ಏನೇ ಉತ್ತರಕೊಟ್ಟರೂ ಅದು ಸರ್ಕಾರದ ಪರವಾಗಿ. ಅದನ್ನೇ ಸ್ಪೀಕರ್ ಅವರು 'ಸರ್ಕಾರವಾಗಿ ಸಮಾಧಾನವಾಗಿ' ಎಂದು ಹೇಳಿದ್ದಾರೆ.
ಅದರರ್ಥ ಅಧಿಕಾರದಲ್ಲಿರುವವರು ಸಮಾಧಾನವಾಗಿ, ಸಹನೆಯಿಂದ ಉತ್ತರಿಸಬೇಕು ಎಂಬುದು. ಸ್ಪೀಕರ್ ಅವರು 'ಸರ್ಕಾರವಾಗಿ ಸಮಾಧಾನವಾಗಿ ಉತ್ತರ ನೀಡಬೇಕು' ಎಂದಿದ್ದಾರೆ.
ಇನ್ನು 'ಕಬ್ಬಿಗೆ ಪ್ರತಿ ವರ್ಷ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡುತ್ತದೆ' ಎಂಬುದೇ ಸರಿಯಾದ ಬಳಕೆ. ಅದರಲ್ಲಿ ಯಾವುದೇ ತಪ್ಪಿಲ್ಲ.

 ವಿಶ್ವೇಶ್ವರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement