ಪ್ರೀತಿಯ ಗೆಳೆಯರೆ, 2014 ಶುರುವಾಗಿದೆ. 2013ರಲ್ಲಿ ನಾನು ಅನೇಕ ತಪ್ಪುಗಳನ್ನು...
ಪ್ರೀತಿಯ ಗೆಳೆಯರೆ, 2014 ಶುರುವಾಗಿದೆ. 2013ರಲ್ಲಿ ನಾನು ಅನೇಕ ತಪ್ಪುಗಳನ್ನು ಮಾಡಿದ್ದೇನೆ. ನಿಮ್ಮನ್ನು ಅಣುಕಿಸಿದ್ದೇನೆ. ನಿಮ್ಮ ಭಾವನೆಗಳೊಂದಿಗೆ ಆಟವಾಡಿದ್ದೇನೆ. ನಿಮ್ಮ ಬಾಳ ಸಂಗಾತಿಯ ಬಗ್ಗೆ ಜೋಕ್ ಮಾಡಿದ್ದೇನೆ. ಆದರೆ ನಾನು ಇವತ್ತು ನಿಮಗೆ ಮನಸ್ಸು ಬಿಚ್ಚಿ ಒಂದು ವಿಷಯ ಹೇಳುತ್ತೇನೆ ಕೇಳಿ. ಹೊಸ ವರ್ಷ ಬಂದಿದೆ. ಇದು ಬದಲಾವಣೆಯ ಕಾಲ. ಹಾಗಾಗಿ ನಾನೂ ಬದಲಾಗುತ್ತೇನೆ...ಅಂತ ನೀವು ಅಂದುಕೊಂಡಿದ್ದರೆ ಅದು ನಿಮ್ಮ ತಪ್ಪು! ಹಿಂದಿನ ವರ್ಷಕ್ಕಿಂತ ಹೆಚ್ಚಿನ ಪರಿಶ್ರಮ ಹಾಕಿ ನಿಮ್ಮನ್ನು ಸತಾಯಿಸಲು ಸಿದ್ಧನಾಗಿದ್ದೇನೆ.
-ಇಂತಿ ನಿಮ್ಮ ಕೋಲ್ಯ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.