ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಮಹಿಳೆಯರಿಗೂ ಹಾಗೂ ಫ್ಯಾಷನ್ಗೂ ಇರುವ ಸಾಮ್ಯತೆ ಏನು?

Mainashree
Updated On : 1 Jan 2014, 10:09 am

ನೇರಲಗುಡ್ಡ ಶಿವಕುಮಾರ, ಶಿರಾ, 9480343742
ಮಹಿಳೆಯರಿಗೂ ಹಾಗೂ ಫ್ಯಾಷನ್ಗೂ ಇರುವ ಸಾಮ್ಯತೆ ಏನು?
ಆಗಾಗ ಬದಲಾಯಿಸಬೇಕು ಅನ್ನಿಸುತ್ತದೆ!

ಫ್ಯಾಷನ್ ಡಿಸೈನರ್ ಮಧು, 9945737427
ಎತ್ತರ ನೋಡಿದ ಮೇಲೆ ಬೆಟ್ಟ ಹತ್ತಬೇಕು, ಉತ್ತರ ಕೇಳಿದ ನಂತರ ಪ್ರೀತಿಸಲು ಆರಂಭಿಸಬೇಕು ಅಲ್ವಾ?
ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ, ಹಾಗೆಯೇ ಪ್ರೀತಿ ಕೂಡ

ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ, 9449130531
ಯಾರೇ ಸಿಕ್ಕರೂ ಹಲ್ಲು ಕಿರಿಯುವ ಹುಡುಗಿಯರ ಮನಸ್ಸನ್ನು ತಿಳಿಯುವುದು ಹೇಗೆ?
ಹಲ್ಲು ನೋಡಿ ಮನಸ್ಸು ತಿಳಿಯುವ ಕಲೆ ರೂಢಿಸಿಕೊಳ್ಳಿ.

ಚಿರಪ್ರಭ, ನಂಜನಗೂಡು, 8553793107
ಶೀಲಾ ದೀಕ್ಷಿತ್ ಅವರ ಮನೆಯಲ್ಲಿ ಪೊರಕೆಗಳಿರುವ ಸ್ಥಾನ ಯಾವುದಿರಬಹುದು?
ಅವರು ಪೊರಕೆ ಬಿಸಾಡಿ ವ್ಯಾಕ್ಯೂಮ್ ಕ್ಲೀನರ್ ತಂದಿಟ್ಟಿದ್ದಾರಂತೆ!

ವಿ. ಹೇಮಂತಕುಮಾರ, ಬೆಂಗಲೂರು, 9035992900
ದೇವರು ಸರ್ವಾಂತರ್ಯಾಮಿ ಎಂದು ತಿಳಿದಿದ್ದರೂ ದೇವಾಲಯಗಳಿಗೆ ಹೋಗುತ್ತೇವೆ ಏಕೆ?
ಕರೆಂಟ್ ಎಲ್ಲಾ ಕಡೆ ಇದ್ದರೂ ಬಿಲ್ ಕಟ್ಟಲು ಕೆಇಬಿ ಕಚೇರಿಗೇ ಹೋಗಬೇಕಲ್ಲವೇ!

 ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement