ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಹೋದ ಜನ್ಮದಲ್ಲಿ ಸಿಕ್ಕಿದ ಹೆಂಡತಿಯೇ ಈ ಜನ್ಮದಲ್ಲಿ ಸಿಕ್ಕರೆ?

Mainashree
Updated On : 6 Jan 2014, 9:51 am

ಸಿ. ನಾಗರಾಜ ಅರದೋಟ್ಲು, ಭದ್ರಾವತಿ
ಹೋದ ಜನ್ಮದಲ್ಲಿ ಸಿಕ್ಕಿದ ಹೆಂಡತಿಯೇ ಈ ಜನ್ಮದಲ್ಲಿ ಸಿಕ್ಕರೆ?
ಹೋದ್ಯಾ ಪಿಶಾಚಿ ಅಂದ್ರೆ ಬಂದೇ ಗವಾಕ್ಷೀಲೀ ಅಂದ್ಹಂಗಾಯ್ತು.

ರವಿಕುಮಾರ ಜಿ.ಬಿ. 9449669897
ಶಿಕ್ಷಕರು ಶಾಲೆ ಪಾಠಕ್ಕಿಂತ ಮನೆ ಪಾಠಕ್ಕೇ ಹೆಚ್ಚು ಗಮನ ಕೊಡುವುದೇಕೆ?
ಮನೆಯೇ ಮೊದಲ ಪಾಠ ಶಾಲೆ ಎಂಬ ಕಾರಣಕ್ಕೆ

ರವಿ
ಒಂದು ವಸ್ತು ಕೊಂಡರೆ ಒಂದು ಫ್ರೀ ಸಿಗುತ್ತೆ ಅಂದರೆ ಜನ ಮುಗಿಬೀಳುತ್ತಾರೇಕೆ?
ಪುಕ್ಕಟೆ ಸಿಕ್ಕಿದ್ರೆ ನಂಗೊಂದಿರ್ಲಿ, ನಮ್ಮಪ್ಗೊಂದಿರ್ಲಿ ಅಂತ!

ರಮೇಶ ಭಟ್ ಆವರ್ಸೆ, ಮೈಸೂರು, 9164276058
ನೀವು ಹುಡುಗಿ ಬಗ್ಗೆ ಪ್ರಶ್ನೆ ಕೇಳಿದರೆ ಬೇಗ ಪ್ರಕಟಿಸ್ತೀರಂತೆ ಹೌದಾ?
ಪ್ರಕಟಿಸಿದರೂ, ಪ್ರಕಟಿಸದಿದ್ದರೂ ಹುಡುಗರ ಆಸಕ್ತಿ ಇರುವುದು ಹುಡುಗಿಯರ ಕುರಿತೇ ಎಂಬುದು ಸಾರ್ವಕಾಲಿಕ ಸತ್ಯ

ರಮೇಶ ಭಟ್, ಮೈಸೂರು
ಅಜ್ಜಿಗೆ ಅರಿವೆಯ ಚಿಂತೆ, ಮೊಮ್ಮಗಳಿಗೆ ಕಜ್ಜಾಯದ ಚಿಂತೆ. ನಿಮಗೆ?
ಅವರಿಬ್ಬರೂ ಬ್ಯುಸಿಯಾಗಿರುವುದರಿಂದ ನಿಶ್ಚಿಂತೆ!

 ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement