ಈ ಹುಡುಗಿಯರು ದೇವರು ಕೊಟ್ಟ ಅಂದವನ್ನು ಮುಚ್ಚಿಡುವುದಾದರೂ ಏಕೆ?
ರಮೇಶ ಭಟ್ ಆವರ್ಸೆ, 9164276058
ಈ ಹುಡುಗಿಯರು ದೇವರು ಕೊಟ್ಟ ಅಂದವನ್ನು ಮುಚ್ಚಿಡುವುದಾದರೂ ಏಕೆ?
ಮುಚ್ಚಿಟ್ಟಿದ್ದು ತನಗೆ, ಬಿಚ್ಚಿಟ್ಟಿದ್ದು ಪರರಿಗೆ!
ಬೋ. ಪಾ. ವೆಂಕಟೇಶ್, 9964862720
ಸತ್ಸಂಗ ಕಾರ್ಯಕ್ರಮಗಳಿಂದ ಯಾರಿಗೆ ಪ್ರಯೋಜನ?
ಸರ್ವಸಂಗ ಪರಿತ್ಯಾಗಿಗಳು ಎಂದು ಹೇಳುವ ಕೆಲವರಿಗೆ..
ಪೇಂಟರ್ ಪಾಪು, ಸಂತೇಮರಹಳ್ಳಿ
ಕೋಟಿ ಕೋಟಿ ಹಣ ಕೂಡಿಟ್ಟರೆ ಮೈತುಂಬ ಕಾಯಿಲೆ ಬರುತ್ತಂತೆ?
ಟೆನ್ಶನ್ಗೆ!
ಕಾಳಿಹುಂಡಿ ಶಿವಕುಮಾರ, ಮೈಸೂರು
ಇಲ್ಲೊಬ್ಬಳು ಯಾವ ಕವಿಯು ಬರೆಯಲಾರ ಅಂತ ಹಾಡ್ತಿದ್ದಾಳಲ್ಲ?
ಕವಿಗಳು ಬರೆಯುವುದು ಬಿಟ್ಟು ವರ್ಷಗಳೇ ಆದವು ಅಂತ ಆಕೆಗೂ ತಿಳಿದಿದೆ ಎಂದಾಯಿತು!
ರವೀಂದ್ರ ನಾಯಕ್, ಪರ್ಕಳ
ಅಂದು, ತಪ್ಪು ಮಾಡಿದರೆ ದೇವರು ನೋಡುತ್ತಾನೆ ಎನ್ನುತ್ತಿದ್ದರು. ಇಂದು?
ಸಿಸಿಟಿವಿ ಕ್ಯಾಮರಾ ಹಾಗೂ ಮೊಬೈಲ್ ಫೋನ್ ಕ್ಯಾಮರಾಗಳು ನೋಡುವ ಸಂಭವ ಜಾಸ್ತಿ!
-ಬಾಣಭಟ್ಟ