ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಹೆಂಡವನ್ನೇಕೆ 'ತೀರ್ಥ' ಅಂತ ಕರೀತಾರೆ?

Vishwanath S
Updated On : 9 Jan 2014, 11:12 am

ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ಹೆಂಡವನ್ನೇಕೆ 'ತೀರ್ಥ' ಅಂತ ಕರೀತಾರೆ?
ನೇರ ಶಿವನ ಪಾದ ಸೇರಿಸುವ ಸಾಧ್ಯತೆಗಳುಹೆಚ್ಚಾಗಿರುವುದರಿಂದ ಹಾಗೆ ಕರೆಯುವುದು ಸರಿಯಾಗಿಯೇ ಇದೆ ಬಿಡಿ.

ಫ್ಯಾಷನ್ ಡಿಸೈನರ್ ಮಧು, 99457-37427
ಈ ಹೃದಯ ನಿಮಗಾಗಿ ಎಂದು ಮೆಸೇಜು ಕಳುಹಿಸಿರುವ ಚೆಲುವೆ, ಕೊನೆಯಲ್ಲಿ 'ಷರತ್ತುಗಳು ಅನ್ವಯಿಸುತ್ತವೆ' ಅಂತ ಬರೆದಿದ್ದಾಳಲ್ಲ?
ಅದನ್ನು ಬರೆಯದಿದ್ದರೂ ಹಾಗೆಯೇ ಅರ್ಥೈಸಿಕೊಳ್ಳಬೇಕು.

ಕೆ. ಎಂ. ಲಿಂಗರಾಜು 9916021365
ಮೈಸೂರು ಪಾಕ್‌ನಲ್ಲಿ ಮೈಸೂರು ಇರಲ್ಲ. ಬುದ್ಧಿಜೀವಿಗಳಲ್ಲಿ?
ಜೀವ ಇದೆ ಎಂಬುದನ್ನಂತೂ ಆಗಾಗ ಸಾಬೀತುಪಡಿಸುತ್ತಿರುತ್ತಾರೆ!

ಎಂ. ಬಿ. ಕೃಷ್ಣಮೂರ್ತಿ, 9449130351
ಪ್ರೀತಿಸಿದ ಹುಡುಗಿಯನ್ನು ಪ್ರೇಮದೇವತೆ ಎನ್ನುವವನಿಗೆ ನಿಮ್ಮ ಸಲಹೆ?
ದೇವತೆಗಳು ನೆಲದ ಮೇಲಿರುವುದು ಅಪರೂಪ. ಹುಷಾರಾಗಿರು!

ಬರ್ಕ್‌ಲಿರಮೇಶ, ಕಿರಗಂದೂರು 9008741348
ನೀನೇ ನನ್ನ ಪ್ರಾಣ ಅಂತಿದ್ದವಳು ಇತ್ತೀಚೆಗೆ ನಾನೊಂದು ತೀರ, ನೀನೊಂದು ತೀರ ಅಂತಿದ್ದಾಳಲ್ಲ?
ಇದು ತೀರದ ಸಮಸ್ಯೆ!



 -ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement