ಒಂದನ್ನು ಪಡೆಯಬೇಕಾದರೆ ಮತ್ತೊಂದನ್ನು ಕಳೆದುಕೊಳ್ಳಬೇಕೆಂಬುದು ಎಷ್ಟು ಸತ್ಯ?
ನಂದಿನಿ ಎಸ್. ಭಾರತೀ ಕಾಲೇಜು
ಒಂದನ್ನು ಪಡೆಯಬೇಕಾದರೆ ಮತ್ತೊಂದನ್ನು ಕಳೆದುಕೊಳ್ಳಬೇಕೆಂಬುದು ಎಷ್ಟು ಸತ್ಯ?
ಬಾಣಭಟ್ಟರನ್ನು ಎದುರಿಸಬೇಕಾದರೆ ಕಳೆದುಕೊಳ್ಳಬೇಕಾಗಿದ್ದು ಐವತ್ತೇ ಪೈಸೆ!
ಸಿ. ನಾಗರಾಜು ಅರದೋಟ್ಲು, ಭದ್ರಾವತಿ
ಹುಟ್ಟಿದ ಮನೆಗೂ ಕೊಟ್ಟ ಮನೆಗೂ ಕೀರ್ತಿ ತರಬೇಕೆಂದು ಹೆಣ್ಣಿಗೇಕೆ ತಾಕೀತು ಮಾಡುತ್ತಾರೆ?
ಆ ಯೋಗ್ಯತೆ ಮತ್ಯಾರಿಗೂ ಇಲ್ಲ ಎಂಬ ಕಾರಣಕ್ಕಿರಬಹುದು!
ಚಿರಪ್ರಭ ನಂಜನಗೂಡು, 8553793107
ಮೂಢನಂಬಿಕೆಗಳನ್ನು ನಿಷೇಧಿಸಲು ಹೊರಟಿದ್ದವರು ಬೆನ್ನಿಹಿನ್ನನ್ನು ಸ್ವಾಗತಿಸುತ್ತಿದ್ದಾರಲ್ಲ?
ಮುಂದೊಂದು, 'ಬೆನ್' ಹಿಂದೊಂದು ಅನ್ನೋದು ಇದಕ್ಕೇ ನೋಡಿ!
ಸರಸ್ವತಿ ರಮೇಶ, ಹನುಮನಾಳು
ಹಗಲಿನ ವೇಳೆಯಲ್ಲೇ ಈ ಸಂಜೆ ಏಕಾಗಿದೆ ಎಂದು ಹಾಡುತ್ತಾರಲ್ಲ?
ಕೆಲವರು ಯಾವಾಗಲೂ ಮಬ್ಬಿನಲ್ಲೇ ಇರುತ್ತಾರೆ.
ಬರ್ಕ್ಲಿ ರಮೇಶ ಕಿರಗಂದೂರು, 9008741348
ಹೆಂಡತಿಯಿಲ್ಲದ ಹಾಸಿಗೆ ಸಪ್ಪೆಯಂತೆ?
ಇಲ್ಲದವರ ಜಾಗದಲ್ಲಿ ಮತ್ಯಾರಿದ್ದಾರೆ ಎಂಬುದನ್ನು ಅವಲಂಬಿಸಿರುತ್ತದೆ!
-ಬಾಣಭಟ್ಟ