ಮೋದಿಯವರಿಗೆ ದೇಶದ ಬಗ್ಗೆ ವಿಷನ್ ಇದೆ...
ಮೋದಿಯವರಿಗೆ ದೇಶದ ಬಗ್ಗೆ ವಿಷನ್ ಇದೆ. ಅರವಿಂದ ಕೇಜ್ರಿವಾಲ್ ಅವರ ಪರ ಟೆಲಿವಿಷನ್ ಇದೆ. ಪಪ್ಪೂಗೆ ಇಲ್ಯೂಷನ್ ಇದೆ. ಆಯ್ಕೆ ನಿಮ್ಮದು.
- ಧರ್ಮಕೃತಿ ಕುಮಾರ್
ಪ್ರೀತಿ ಕಾಫಿಶಾಪ್ನಲ್ಲಿ ಆರಂಭವಾಗುತ್ತದೆ ಹಾಗೂ ವೈನ್ಶಾಪ್ನಲ್ಲಿ ಮುಕ್ತಾಯವಾಗುತ್ತದೆ.
- ಗಾಸಿಪ್ ಗರ್ಲ್
'ಹಲೋ, ಹೇಳಿ ಇದು ದೆಹಲಿ ಭ್ರಷ್ಟಾಚಾರ ವಿರೋಧಿ ಸಹಾಯವಾಣಿ'
'ನನಗೆ ಶೀಲಾ ದೀಕ್ಷಿತ್ ವಿರುದ್ಧ ದೂರು ಕೊಡಬೇಕಿತ್ತು...'
'ನೀವು ಕರೆ ಮಾಡಿರುವ ನಂಬರು ವ್ಯಾಪ್ತಿ ಪ್ರದೇಶದ ಹೊರಗಿದೆ'
- ಡೊನಾಲ್ಡ್ ಡಕ್
ಮೊದಲೆಲ್ಲ 'ಏನ್ ನಡೀತಾ ಇದೆ' ಅಂತ ಲೋಕಾಭಿರಾಮ ಶುರು ಮಾಡುತ್ತಿದ್ದರು. ಈಗ 'ಕೇಜ್ರಿವಾಲ್ದು ಏನ್ ಸುದ್ದಿ ಇವತ್ತು' ಅಂತ ಬದಲಾಗಿದೆ!
- ಟ್ರಿಕಿ ಡೋನರ್