ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಮನುಷ್ಯನಿಗೆ ತಾನು ಇಂತಹ ದಿನವೇ ಸಾಯುತ್ತೇನೆಂದು...

Vishwanath S
Updated On : 13 Jan 2014, 12:17 pm

ಬರ್ಕಲಿರಮೇಶ, ಕಿರಗಂದೂರು, ಮಂಡ್ಯ, 9008741348
ಮನುಷ್ಯನಿಗೆ ತಾನು ಇಂತಹ ದಿನವೇ ಸಾಯುತ್ತೇನೆಂದು ಮೊದಲೇ ಗೊತ್ತಾಗುವಂತಿದ್ದರೆ ಏನಾಗುತ್ತಿತ್ತು?
ಅದೇ ಕೊರಗಲ್ಲಿ ದಿನವೂ ಸಾಯುತ್ತಿದ್ದ.

ಹರಳಹಳ್ಳಿ ಪುಟ್ಟರಾಜು, ಪಾಂಡವಪುರ, 9632838088
ಬುದ್ಧಿ ಜೀವಿಗಳಿಗೂ ಸಾಮಾನ್ಯರಿಗೂ ಇರುವ ವ್ಯತ್ಯಾಸವೇನು?
ಸಾಮಾನ್ಯ ಜನ ಇರುವ ಬುದ್ಧಿಯನ್ನು
ತೋರಿಸಿಕೊಳ್ಳುವುದಿಲ್ಲ.

ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ಒಬ್ಬ ಹುಡುಗ ಹುಡುಗಿ ರಸ್ತೇಲಿ ಜೊತೇಲಿ ಹೋಗ್ತಾ ಇದ್ರೆ, ಎಲ್ರೂ ಲವ್ವರ್ಸ್ ಅಂತಾನೇ ತಿಳ್ಕೋತಾರಲ್ಲ?
ಹುಡುಗ-ಹುಡುಗಿ ನಡುವೆ ಅದು ಬಿಟ್ಟು ಬೇರೆ ಸಂಬಂಧ ಇರಲು ಸಾಧ್ಯವೇ ಇಲ್ಲ ಅಂದುಕೊಂಡಿರುವ ಮೂರ್ಖರ ಸಂಖ್ಯೆಯೇ ಹೆಚ್ಚಿದೆ.

ನೇರಲಗುಡ್ಡ ಶಿವಕುಮಾರ, ಶಿರಾ, 9480343742
ಲಂಗಧಾರಿಗೂ ಲುಂಗಿಧಾರಿಗೂ
ಇರುವ ಭಿನ್ನತೆ ಏನು?
ಒಂದು ಸ್ತ್ರೀಲಿಂಗ, ಇನ್ನೊಂದು ಪುಲ್ಲಿಂಗ.

ವಿ. ನಾರಾಯಣ್, ಬೆಳಗೊಳ, ಮಂಡ್ಯ, 9964569971
ತೆಂಗಿನಕಾಯಿಗೆ ಈಗ ಒಳ್ಳೆ ಬೆಲೆಯಿದೆ. ಈ ಸಮಯದಲ್ಲಿ ಅದನ್ನು ಯಡಿಯೂರಪ್ಪ ಅನಾಥವಾಗಿ ಮಾಡಿದ್ದು ಸರೀನಾ?
ರೇಟಿದ್ದಾಗಲೇ ಕೊಟ್ಟುಬಿಡಬೇಕು.


 -ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement