ಬದುಕು ಜಟಕಾ ಬಂಡಿ. ಆದ್ರೆ ಮದುವೆ?
ವಿ. ನಾರಾಯಣ್, ಬೆಳಗೊಳ, ಮಂಡ್ಯ, 9964569971
ಬದುಕು ಜಟಕಾ ಬಂಡಿ. ಆದ್ರೆ ಮದುವೆ?
ಜಟಕಾ ಬಂಡಿಯ ಉದ್ಘಾಟನಾ ಸಮಾರಂಭ!
ರವಿಕುಮಾರ ಜಿ.ಬಿ. 9449669897
ಸೀರಿಯಲ್‌ಗಳಲ್ಲಿ ಹೆಚ್ಚಾಗಿ ಗಂಡಸರನ್ನು ಕೆಟ್ಟವರಂತೆ ಮಹಿಳೆಯರನ್ನು ಒಳ್ಳೆಯವರಂತೆ ತೋರಿಸುತ್ತಾರೆ ಯಾಕೆ?
ಹೆಚ್ಚು ನೋಡುವವರು ಮಹಿಳೆಯರೇ ಆಗಿರುವುದರಿಂದ!
ರವಿಕುಮಾರ ಜಿ.ಬಿ. 9449669897
ಸರ್ಕಾರದ ಕೆಲಸ ದೇವರ ಕೆಲಸ ಎಂದು ವಿಧಾನಸೌಧದ ಮುಂದೆ ಬರೆದಿದ್ದರೆ, ಒಳಗೆ ನಡೆಯುವುದೇನು?
ಪೂಜೆ ಕಾಣಿಕೆ ಸಮರ್ಪಣೆಗೆ ಜಾಗ ಬೇಡವೇ!
ವಿ. ಹೇಮಂತಕುಮಾರ, ಬೆಂಗಳೂರರು, 9035992900
ಪ್ರಣಯದ ಆರಂಭ ಚುಂಬನದಿಂದಲೋ
ಅಪ್ಪುಗೆಯಿಂದಲೋ?
ಆರಂಭ ಹೇಗೇ ಆದರೂ ಅಂತ್ಯಮಾತ್ರ ಒಂದೇ!
ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ಕೆಲವರು ಮದುವೆಯನ್ನು ಇಲಿಯ ಬೋನಿಗೆ ಹೋಲಿಸುತ್ತಾರಲ್ಲಾ?
ಮನೇಲಿ ಇಲಿ ಬೀದೀಲಿ ಹುಲಿ ಪಿಕ್ಚರ್ ನೋಡಿ ಅರ್ಥವಾಗುತ್ತೆ.
-ಬಾಣಭಟ್ಟ