ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

'ಮರುಳ'ಸಿದ್ದಪ್ಪ ಅವರ ಪ್ರಕಾರ ಅನಮಂತಮೂರ್ತಿ ಆಧುನಿಕ ಬಸವಣ್ಣರಂತೆ?

Vishwanath S
Updated On : 15 Jan 2014, 12:21 pm

ಮಹಾಂತೇಶ, ಬನಶಂಕರಿ, ಬೆಂಗಳೂರು
'ಮರುಳ'ಸಿದ್ದಪ್ಪ ಅವರ ಪ್ರಕಾರ ಅನಮಂತಮೂರ್ತಿ ಆಧುನಿಕ ಬಸವಣ್ಣರಂತೆ?
ಹೌದು. ಹೌದು. ಅವರು ಆಧುನಿಕ 'ಬಸವ'ಣ್ಣ!

ಸಂಕೇತ್ ಕೈರಂಗಳ, ಮಂಗಳೂರು
ನನ್ನ ಹುಡುಗಿಯನ್ನು ಹೊಸ ರೀತಿಯಲ್ಲಿ ಹೊಗಳಬೇಕೆಂದಿದ್ದೇನೆ. ಒಂದು ಉದಾಹರಣೆಕೊಡಿ.
ನಾನು ಸೋರುವ ಮೂಗಿನಂತಿರುವೆ, ನೀನು ಹೊಳೆವ ಮೂಗುತಿ ಅಂತ ಹೇಳಿನೊಡು!

ಚಿರಪ್ರಭ ನಂಜನಗೂಡು, 8553793107
ಮೂಢನಂಬಿಕೆಗಳನ್ನು ನಿಷೇಧಿಸಲು ಹೊರಟಿದ್ದವರು ಬೆನ್ನಿಹಿನ್‌ನ ಬೆನ್ನಹಿಂದೆ ಬಿದ್ದಿದ್ದಾರಲ್ಲ?
ಈ ರೀತಿಯ ಢೋಂಗಿಗಳನ್ನು ಮೊದಲು ನಿಷೇಧಿಸಬೇಕು.

ಲಕ್ಕೂರು ಎಂ.ನಾಗರಾಜ, ಮಾಲೂರು, 900538954
ನಿರ್ವಾಹಕ, ಪ್ರಯಾಣಿಕರ ನಡುವಿನ ಉತ್ತಮ ಬಾಂಧವ್ಯದ ಸಂಕೇತ ಏನಿರಬಹುದು?
ಚಿಲ್ಲರೆ!

ಸಿ.ನಾಗರಾಜ ಅರದೋಟ್ಲು, ಭದ್ರಾವತಿ
ಹೆಣ್ಣೊಂದು ಕಲಿತರೆ ಶಾಲೆಯೊಂದುತೆರೆದಂತೆ. ಹೆಣ್ಣೊಂದು ಮುನಿದರೆ?
ಸಂಸಾರವೊಂದು ಮುರಿದಂತೆ.


- ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement