ನೀವು ಯಾವ ಸಂಗತಿ ಕೇಳಿದರೆ ರೋಮಾಂಚನಗೊಳ್ಳುತ್ತೀರಿ?
ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ, 9449130531
ನೀವು ಯಾವ ಸಂಗತಿ ಕೇಳಿದರೆ ರೋಮಾಂಚನಗೊಳ್ಳುತ್ತೀರಿ?
ವ್ಯಾಕ್ಸಿಂಗ್ ಮಾಡಿಸಿಕೊಂಡವರೂ ರೋಮಾಂಚನಗೊಂಡರು ಎಂದು ಕೇಳಿದಾಗ!
ವಾದಿರಾಜ ಜಿ. ರಾಯ್ಕರ್, ಬೆಂಗಳೂರು
ಹೂವಾಗಿ ಅರಳಿದ ಹುಡುಗಿಯರು ಬೆಳೆದಂತೆ ಹಾವಾಗಿ ಪರಿವರ್ತನೆಯಾಗುತ್ತಾರಲ್ಲಾ?
ಪುಂಗಿ ಊದುವವರ ಸಂಖ್ಯೆ ಹೆಚ್ಚಾಗುವುದರಿಂದ!
ಸಂತೋಷಕುಮಾರ, ಸಾಲಿಗ್ರಾಮ
ಸಕ್ಕರೆಗೆ ಇರುವೆಗಳು ಮುತ್ತಿಕೊಳ್ಳುವಂತೆ ಫ್ಯಾಷನ್ ಡಿಸೈನರ್ ಮಧುಗೆ ಹುಡುಗಿಯರು ಮುತ್ತಿಕೊಳ್ಳಲು ಕಾರಣವೇನು?
ಪುಕ್ಕಟೆ ಫ್ಯಾಷನ್ ಮಾಡುವ ಹಂಬಲ.
ಸಿ. ನಾಗರಾಜ ಅರದೋಟ್ಲು, ಭದ್ರಾವತಿ
ಅನ್ಯದಿನ ಪತ್ರಿಕೆಯೊಂದರಲ್ಲಿ ನಾವು ಬರೆಯದ ಪ್ರಶ್ನೆಗೆ ಉತ್ತರಿಸಿದ್ದಾರಲ್ಲ?
ಪ್ರಪಂಚದಲ್ಲಿ ಪವಾಡಗಳು ನಡೆಯುತ್ತಲೇ ಇರುತ್ತವೆ.
ಕಾಲ್ಸೆಂಟರ್ ಶಿವಕುಮಾರ, ನಂಜಾಪುರ,
ರಾಮನಗರ
ಬಿಡದಿ ಆಶ್ರಮ ನಿತ್ಯಾನಂದನ ಆಶ್ರಮವಾದರೆ, ಮಾ ಆನಂದಮಯಿ ಆಶ್ರಮ ಯಾವುದು?
ಒಟ್ಟಿಗಿದ್ದರೆ ತಾನೇ 'ನಿತ್ಯಾನಂದ'ದಿಂದ ಆನಂದಮಯಿಯಾಗುವುದು ಸಾಧ್ಯವಾಗುವುದು!
-ಬಾಣಭಟ್ಟ