ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಮೊಯಿಲಿ ಆತುರ- ಆತಂಕ

Vishwanath S
Updated On : 17 Jan 2014, 12:11 pm

ಕೇಂದ್ರದಲ್ಲಿ ಮಾಜಿ ಪರಿಸರ ಸಚಿವೆ ಜಯಂತಿ ನಟರಾಜನ್ ಅವರ ಕಾಲದಲ್ಲಿ ಹಲವು  ಹತ್ತು ಲಕ್ಷ ಕೋಟಿ ರುಪಾಯಿಗಳ ಯೋಜನೆಗಳಿಗೆ ಅನುಮತಿ ನೀಡುವುದರಲ್ಲಿ ವಿಳಂಬವಾಗಿದ್ದ ಹಿನ್ನೆಲೆಯಲ್ಲಿ, ವೀರಪ್ಪ ಮೊಯಿಲಿ ಅವರು ಪರಿಸರ ರಕ್ಷಣೆ ಇಲಾಖೆಯನ್ನು ವಹಿಸಿಕೊಂಡ ಮೂರೇ ವಾರಗಳಲ್ಲಿ ಎಪ್ಪತ್ತು ಉದ್ಯಮಗಳ ವಿಚಾರದಲ್ಲಿ ಇಲಾಖೆಯ ಒಪ್ಪಿಗೆಯನ್ನು ನೀಡಿರುವುದು ಒಂದು ದೊಡ್ಡ ವಿವಾದವನ್ನೇ ಸೃಷ್ಟಿಸುವ ಸಂಭವವಿದೆ.
 ವೀರಪ್ಪ ಮೊಯಿಲಿ ಅಧಿಕಾರ ವಹಿಸಿಕೊಂಡ ಅನಂತರ ಪರಿಸರ ಇಲಾಖೆಯ ಅನುಮತಿ ಪಡೆದ ಉದ್ಯಮಗಳಲ್ಲಿ ಒಡಿಶಾದಲ್ಲಿ ಬಹುದೊಡ್ಡ ಉಕ್ಕಿನ ಕಾರ್ಖಾನೆಯನ್ನು ಸ್ಥಾಪಿಸಲು ಅರ್ಜಿ ಸಲ್ಲಿಸಿರುವ ದಕ್ಷಿಣ ಕೊರಿಯಾದ ದೈತ್ಯ ಸಂಸ್ಥೆ ಪೋಸ್ಕೋ ಸಂಸ್ಥೆಯೂ ಒಂದು.
 ಈಗ ಪರಿಸರದ ಇಲಾಖೆ ಅನುಮತಿ ನೀಡಿರುವ ಬಹುತೇಕ ಉದ್ಯಮಗಳ ಸ್ಥಾಪನೆಯಿಂದ ಹಲವು ಸಹಸ್ರ ವನವಾಸಿಗಳು ಹಾಗೂ ಇತರ ಸಮುದಾಯಗಳ ಜನಜೀವನದಲ್ಲಿ ಏರುಪೇರಾಗಲಿದೆ. ಈಗಾಗಲೇ ಈ ಸಂಬಂಧದಲ್ಲಿ ಆ ಭಾಗದ ಹಲವಾರು ಜನಪರ ಸಂಘಟನೆಗಳು ಹೋರಾಟಗಳನ್ನು ನಡೆಸಿದ್ದವು .
 ಈಗ ಅಂತಾರಾಷ್ಟ್ರೀಯ ಸಂಘಟನೆಗಳೂ ತಮ್ಮ ಸಂಶಯಗಳನ್ನು ಪ್ರಕಟಿಸಿರುವುದು ಒಂದು ವಿಶೇಷವೇ. ಎಂಟು-ಒಂಬತ್ತು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಹಲವು ಯೋಜನೆಗಳಿಗೆ ಅಲ್ಪಾವಧಿಯಲ್ಲೇ ಅನುಮತಿ ಸಿಕ್ಕಿರುವುದರಿಂದ, ಈ ಆತುರದ ಕಾರ್ಯಕ್ರಮದಲ್ಲಿ ಪರಿಸರ ರಕ್ಷಣೆಯ ಮೂಲ ಉದ್ದೇಶಕ್ಕೆ ಧಕ್ಕೆ ಬರಬಾರದೆನ್ನುವುದೇ ಪ್ರಜ್ಞಾವಂತರ ಕಾಳಜಿ.
 ಇಷ್ಟು ದಿನ ಈ ಯೋಜನೆಗಳ ವಿಚಾರದಲ್ಲಿ ಇಲ್ಲದಿದ್ದ ಕಾಳಜಿ, ಕೇಂದ್ರಕ್ಕೆ ಈಗ ದಿಢೀರನೆ ಮೂಡಿದ್ದೇಕೆ?

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement