ಕೈ ಹಿಡಿದವಳು ಮನದಲ್ಲಿರಬೇಕೊ ಮನೆಯಲ್ಲಿರಬೇಕೊ?
ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ಲಂಚವನ್ನು ತಿನ್ನಲು ಅದು ಹಣ್ಣಲ್ಲ, ತರಕಾರಿಯಲ್ಲ, ಧಾನ್ಯವೂ ಅಲ್ಲ. ಆದ್ರೂ ಲಂಚತಿಂದ ಅನ್ನೋದ್ಯಾಕೆ?
ಫೋನ್ ತುಂಡಾಗದಿದ್ದರೂ ಸಾರಿ ಫೋನ್ ಕಟ್ ಆಗೋಯ್ತು ಅಂತಾರಲ್ಲ ಹಾಗೇ ಇದು!
ನೇರಲಗುಡ್ಡ ಶಿವಕುಮಾರ, ಶಿರಾ, 9480343742
ಅಂದಿನ ದುಂಡು ಮೇಜಿನ ಸಭೆಗೆ ಹಾಗೂ ಇಂದಿನ ಗುಂಡು ಮೇಜಿನ ಪಾರ್ಟಿಗೆ ಇರುವ ಭಿನ್ನತೆ ಏನು?
ಅವರು ಫೈಟಾಗಿ ಹೊರಬರುತ್ತಿದ್ದರು, ಇವರು ಟೈಟಾಗಿ ಹೊರಬರುತ್ತಾರೆ!
ಸಿ. ನಾಗರಾಜ, ಅರದೋಟ್ಲು, ಭದ್ರಾವತಿ
ಕೈ ಹಿಡಿದವಳು ಮನದಲ್ಲಿರಬೇಕೊ ಮನೆಯಲ್ಲಿರಬೇಕೊ?
ಎರಡೂ ಕಡೆ ಇದ್ದರೆ ಚೆನ್ನ.
ಓಂಚನ್ನೇಶ್ ಅರಬಿಳಚಿಕ್ಯಾಂಪ್, ಭದ್ರಾವತಿ, 9901257131
ದೇವರು ಕೊಟ್ರೂ ಪೂಜಾರಿ ಕೊಡೋದಿಲ್ಲಾ ಯಾಕೆ ಸಾರ್?
ಅದು ಹೋಗ್ಲಿ ಪೂಜಾರಿಗೆ ಟಿಕೆಟ್ ಕೊಡಲ್ಲ ಅಂತಾರಂತೆ ಕೈ ಪಾಳಯದ ಕೆಲವರು!
ಓಂಚನ್ನೇಶ್, ಭದ್ರಾವತಿ
ನಮಗೆ ಬೀಳುವ ಕನಸುಗಳೆಲ್ಲಾ ಇಂಗ್ಲೀಷ್‌ನಲ್ಲಿ ಯಾಕೆ ಬೀಳುವುದಿಲ್ಲ?
ಅರ್ಥವಾಗದಿದ್ದರೆ ಎಂಬ ಕಾಳಜಿಯಿಂದ!
- ಬಾಣಭಟ್ಟ