ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

ಬಳ್ಳಾರಿ ಜಿಲ್ಲೆಯಲ್ಲಿರುವ ಹಂಪಿ ವಿಶ್ವವಿದ್ಯಾಲಯದಲ್ಲಿ ಕಿರಿಯ ಸಹಾಯಕರಾಗಿರುವ ಬಿ.ಎ. ರಾಜಕುಮಾರ ಅವರು ಬರೆಯುತ್ತಾರೆ..

Rashmi Kasaragodu
Updated On : 22 Jan 2014, 12:24 pm

ಬಳ್ಳಾರಿ ಜಿಲ್ಲೆಯಲ್ಲಿರುವ ಹಂಪಿ ವಿಶ್ವವಿದ್ಯಾಲಯದಲ್ಲಿ ಕಿರಿಯ ಸಹಾಯಕರಾಗಿರುವ ಬಿ.ಎ. ರಾಜಕುಮಾರ ಅವರು ಬರೆಯುತ್ತಾರೆ- 'ಜ.17ರಂದು ಕ.ಪ್ರ.ದ ಮುಖಪುಟ ಸುದ್ದಿಯಲ್ಲಿನ ಫೋಟೋಗಳೇ ಅದಲು ಬದಲಾಗಿವೆ. 'ಡೆಲ್ಲಿಯಿಂದ ವೈಟ್ ಹೌಸ್‌ವರೆಗೂ...' ಸುದ್ದಿಯಲ್ಲಿ ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಮಿತ್ ಹಾಲಂಡೆ ಅವರ ಹೆಸರಿನ ಕೆಳಗೆ ಅವರ ಪತ್ನಿ ವೆಲೆರಿ ಫೋಟೋ, ವೆಲೆರಿ ಹೆಸರಿನ ಕೆಳಗೆ ಹಾಲಂಡೆ ಅವರ ಫೋಟೋ ಪ್ರಕಟವಾಗಿದೆ.' ಮುದ್ರಣಕ್ಕೆ ಸುದ್ದಿಯನ್ನು ಅಣಿಗೊಳಿಸುವವರು ಸುದ್ದಿಯ ಶೀರ್ಷಿಕೆಗಳನ್ನು ಗಮನಿಸಿ, ಅದಕ್ಕೆ ತಕ್ಕಂತೆ ಫೋಟೋಗಳನ್ನು ಅಳವಡಿಸಿದ್ದರೆ ಈ ಗೊಂದಲವಾಗುತ್ತಿರಲಿಲ್ಲ, ಅಲ್ಲವೇ? ಇನ್ನು ಮುಂದಾದರೂ ಇವರು ಜಾಗ್ರತೆ ವಹಿಸುತ್ತಾರೆಂದು ನಂಬಿದ್ದೇನೆ' ಎಂದಿದ್ದಾರೆ.
ಮೈಸೂರಿನಿಂದ ಎಚ್.ಕೆ. ಶಿವಶಂಕರ್ ಅವರು ಬರೆಯುತ್ತಾರೆ, 'ಜ.17ರ ಕ.ಪ್ರ. ಪತ್ರಿಕೆ ಚಿತ್ರಪ್ರಭ ವಿಭಾಗದಲ್ಲಿ ಶಾಕಿಂಗ್ ನ್ಯೂಸ್ ಎಂಬ ಲೇಖನದಲ್ಲಿ ಸಾಫ್ಟ್ ವೇರ್ ಹುಡುಗನ ಕೊಂದ ಶುಭಾ ಬಗ್ಗೆ ಪ್ರಕಟವಾಗಿದೆ.'
"ಅಂದು 'ಹೌದು, ಏನೀಗ ಹೋಗಲಿ ಬಿಡಿ' ಎಂಬ ಮನೋಭಾವ ಹೊಂದಿದ್ದ ಶುಭಾ ಈಗ ತನ್ನ ಕಥೆ ಹೊಂದಿದ ಸಿನಿಮಾ ಒಂದು ತಯಾರಾಗುತ್ತಿದೆ ಎಂದು ತಿಳಿದಾಗ ಗಲಿಬಿಲಿಗೊಂಡಿದ್ದಾಳೆ' ಎಂದು ಪ್ರಕಟವಾಗಿದೆ.'
'ಕೆಲವು ವರ್ಷಗಳ ಹಿಂದೆಯೇ ಜೈಲಿನಲ್ಲಿದ್ದ ಶುಭಾ ಪೆರೋಲ್ ಮೇಲೆ ಹೊರಗೆ ಬಂದು ತನ್ನ ತಂದೆಯ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಳು ಎಂಬ ವರದಿ ಕನ್ನಡಪ್ರಭದಲ್ಲೇ ಓದಿದ ನೆನಪು.
ಈ ದಿನದ ಲೇಖನ, ನನ್ನ ನೆನಪು ಯಾವುದು ಸರಿ? ನನ್ನ ನೆನಪು ಸರಿಯಾಗಿಲ್ಲದಿದ್ದರೆ 'ತಪ್ಪಾಯ್ತು ತಿದ್ಕೋತೀವಿ" ಎಂದಿದ್ದಾರೆ.
ಬೆಂಗಳೂರಿನಿಂದ ರವಿಕುಮಾರ ಜಿ.ಬಿ. ಅವರು ಬರೆಯುತ್ತಾರೆ, 'ಡಿ.30ರ ಕ.ಪ್ರ.ದ 'ಬೈಟು ಕಾಫಿ'ಯ ಪುಟ 2ರಲ್ಲಿ 'ಬೆಳ್ಳಿತಟ್ಟೆ' ಗೀನ್ ಟೀ ಬದಲು ಗೀನ್ ಟಾ ಎಂದು ಪ್ರಕಟಗೊಂಡಿದೆ. ಹಾಗೆ ಸದಾನಂದ ಮೈಯ್ಯ ಬರೆದ ಗೀನ್ ಟೀ ಬಗ್ಗೆ ಲೇಖನ ಆದರೆ ಲೇಖನ ಮಧ್ಯೆ ಪ್ರಕಟಗೊಂಡ ಫೋಟೊ ಮಾತ್ರ ಲೇಮನ್ ಟೀದು ಯಾಕೆ ಹೀಗೆ?' ಎಂದಿದ್ದಾರೆ.
ರವಿಕುಮಾರ ಜಿ.ಬಿ. ಅವರು ಹೇಳುವಂತೆ 'ಟೀ' ಬದಲು 'ಟಾ' ಆಗಿದ್ದು ಹೌದು. ಆದರೆ ರವಿಕುಮಾರ ಅವರು ಬರೆದಂತೆ ನಾವು 'ಗೀನ್‌' ಎಂದು ತಪ್ಪಾಗಿ ಬಳಸದೇ 'ಗ್ರೀನ್‌' ಎಂದು ಸರಿಯಾಗಿ ಬಳಸಿದ್ದೇವೆ! ಗ್ರೀನ್ ಟೀ ಲೆಮನ್ ಟೀ ಆಗಿಲ್ಲ. ಗ್ರೀನ್ ಟೀನಲ್ಲಿ ಸಾಕಷ್ಟು ವಿಧಗಳಿವೆ. ಅವೆಲ್ಲವನ್ನೂ ಪ್ರಾತಿನಿಧಿಕವಾಗಿ ಹೊಂದಿರುವ ಚಿತ್ರ ಪ್ರಕಟಿಸಲಾಗಿದೆ. ಜತೆಗೆ ಲಿಂಬು ಕೂಡ ಇದೆ. ಲೆಮನ್ ಟೀಗೆ ಯಾರೂ ತುಳಸಿ, ಬೆರ್ರಿ ಹಣ್ಣುಗಳನ್ನು ಹಾಕುವುದಿಲ್ಲ ಎಂಬುದು ಅವರಿಗೆ ತಿಳಿದಿರಬಹುದು.
ಇನ್ನು ಎಚ್.ಕೆ. ಶಿವಶಂಕರ್ ಅವರ ನೆನಪಿಗಿಂತ ನಮ್ಮ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ ಸರಿಯಾಗಿದೆ ಎಂದಷ್ಟೇ ಹೇಳಬಯಸುತ್ತೇನೆ.

 -ವಿಶ್ವೇಶ್ವರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement