ಸಂಪಾದಕೀಯ

ಸ್ವಾಮಿ ಭಕ್ತ ಡೊಂಬ ಹೆಗ್ಗಡೆ

ಕೆಳದಿಯ ಸೋಮಶೇಖರನಾಯಕನ ಸಾಮಂತನಾಗಿದ್ದವನು ಯಟ್ಟಿಲದ ರವಿವರ್ಮ ನರಸಿಂಹರಸ ಡೊಂಬ ಹೆಗ್ಗಡೆ. ...

ಕೆಳದಿಯ ಸೋಮಶೇಖರನಾಯಕನ ಸಾಮಂತನಾಗಿದ್ದವನು ಯಟ್ಟಿಲದ ರವಿವರ್ಮ ನರಸಿಂಹರಸ ಡೊಂಬ ಹೆಗ್ಗಡೆ. ಅವನು ತನ್ನ ಸೀಮೆಯನ್ನು ತುಂಬಾ ಯಶಸ್ವಿಯಾಗಿ ಆಡಳಿತ ಮಾಡಿಕೊಂಡಿದ್ದ ಆಡಳಿತಗಾರನಾಗಿದ್ದನು. ಅವನ ಆಡಳಿತ ಕಾಲದಲ್ಲಿ ಬ್ರಿಟಿಷರಿಗೆ ಆ ಪ್ರದೇಶಕ್ಕೆ ಕಾಲಿಡಲೂ ಆಗುತ್ತಿರಲಿಲ್ಲ. ಪ್ರತಿವರ್ಷವೂ ತಪ್ಪದೆ ಕಪ್ಪ ಕಾಣಿಕೆಯನ್ನು ಅರ್ಪಿಸುತ್ತಿದ್ದ ಡೊಂಬ ಹೆಗ್ಗಡೆಗೆ ಕಾರಣಾಂತರಗಳಿಂದ ಒಮ್ಮೆ ಸೋಮಶೇಖರ ನಾಯಕನಿಗೆ ಕಪ್ಪಕಾಣಿಕೆ ಕೊಡಲು ತೊಂದರೆಯಾಯಿತು. ಇದನ್ನೇ ಬಳಸಿಕೊಂಡ ಹೆಗ್ಗಡೆಯ ವಿರೋಧಿಗಳು ನಾಯಕನಿಗೆ ಇಲ್ಲಸಲ್ಲದ್ದನ್ನು ಹೇಳಿ ಡೊಂಬ ಹೆಗಡೆಯ ಮೇಲೆ ಆಗ್ರಹಗೊಳ್ಳುವಂತೆ ಮಾಡಿದರು. ಹಿಂದೆಮುಂದೆ ಯೋಚಿಸದೆ ನಾಯಕನು ಕಪ್ಪ ನೀಡದ ಡೊಂಬ ಹೆಗೆಡೆಯನ್ನು ಸೆರೆಮನೆಗೆ ತಳ್ಳಿಸಿದ. ಸೆರೆಮನೆಯ ಅಧಿಕಾರಿಯಾಗಿದ್ದ ಈಶ್ವರಯ್ಯ ಎಂಬವನಿಗೆ ಡೊಂಬ ಹೆಗೆಡೆಯ ಸ್ವಾಮಿನಿಷ್ಠೆ ಮತ್ತು ಪರಿಸ್ಥಿತಿಯ ಅರಿವಿತ್ತು.  ಅವನ ಶಕ್ತಿ ಸಾಮರ್ಥ್ಯಗಳ ಅಭಿಮಾನಿಯೂ ಅವನಾಗಿದ್ದನು. ಕೆಳದಿ ಅರಸರಿಗೆ ವಿಧೇಯನಾಗಿದ್ದ ಹೆಗ್ಗಡೆ ರಾಜಾದಾಯವಿಲ್ಲದೆ ಕಪ್ಪಕೊಡಲು ಸಾಧ್ಯವಾಗದೇ ಇದ್ದುದು ಅವನಿಗೆ ತಿಳಿದಿತ್ತು. ಹೀಗಾಗಿ ಅವನ ಮೇಲಿನ ವಿಶ್ವಾಸದಿಂದ ಏನಾದರೂ ಮಾಡಿ ಸೆರೆಮನೆಯಿಂದ ಬಿಡಿಸಲು ನಿರ್ಧರಿಸಿದ. ಮಹಾನವಮಿಯ ಸಂಜೆ ಈಶ್ವರಯ್ಯ ಡೊಂಬ ಹೆಗ್ಗಡೆಯವರನ್ನು ಭೇಟಿಮಾಡಿ ಅವನಿಗೆ ಒಂದುಸಾವಿರ ಹೊನ್ನುಗಳನ್ನು ನೀಡಿ, ಅದನ್ನು ನಾಯಕನಿಗೆ ನೀಡಿ, ಉಳಿದ ಕಪ್ಪನೀಡಲು ಸಮಯಯಾಚಿಸಿ ಬಿಡುಗಡೆ ಹೊಂದಲು ಸಲಹೆ ನೀಡಿದ. ಅದರಂತೆ ಡೊಂಬನಾಯಕನು ಸೋಮಶೇಖರ ನಾಯಕನನ್ನು ಅವನ ಆಸ್ಥಾನದಲ್ಲಿ ಭೇಟಿಮಾಡಿ ಒಂದು ಸಾವಿರ ವರಹಗಳನ್ನು ನೀಡಿ ಉಳಿದ ಕಪ್ಪವನ್ನು ನೀಡಲು ಸಮಯ ನೀಡಬೇಕೆಂದು ಮನವಿ ಮಾಡಿಕೊಂಡನು. ಸೋಮಶೇಖರ ನಾಯಕನು ಡೊಂಬನಾಯಕನ ಸ್ವಾಮಿನಿಷ್ಠೆಯ ಬಗ್ಗೆ ಕೇಳಿ ತಿಳಿದಿದ್ದನು. ಅವನಿಗಿದ್ದ ಕೋಪ ಅಷ್ಟರಲ್ಲಿ ಮಾಯವಾಗಿತ್ತು. ಅಲ್ಲದೆ, ಅವನಿಲ್ಲದೆ ತನ್ನ ಗಡಿಭಾಗಗಳನ್ನು ರಕ್ಷಿಸಲು ಸಾಧ್ಯವಾಗದು ಎಂಬ ಅರಿವಿತ್ತು. ಆದ್ದರಿಂದ ಅವನು ಹೆಗ್ಗಡೆ ಕೊಡುವ ಕಪ್ಪದಲ್ಲಿ ಅರ್ಧದಷ್ಟು ಕಡಿಮೆ ಮಾಡಿ ಸೂಕ್ತ ಗೌರವಗಳೊಡನೆ ಕಳುಹಿಸಿಕೊಟ್ಟನು. ಹೀಗೆ ತನ್ನ ಸೀಮೆಗೆ ಹಿಂದಿರುಗಿ ಬಂದ ಡೊಂಬ ಹೆಗ್ಗಡೆಯ ಯಶಸ್ಸನ್ನು ನೋಡಿ ಕರುಬಿದ ಬ್ರಿಟಿಷರು ಅವನ ಅಧಿಕಾರವನ್ನು ಹೇಗಾದರೂ ಮಾಡಿ ಪ್ರತಿಬಂಧಿಸಲು ಪ್ರಯತ್ನಿಸಿದರು. ಇದರಿಂದ ರೋಷಗೊಂಡ ಡೊಂಬ ಹೆಗ್ಗಡೆಯು ಬಹಿರಂಗವಾಗಿಯೇ ಬ್ರಿಟಿಷರ ವಿರುದ್ಧ ದಂಗೆ ಎದ್ದನು. ಕೊನೆಗೆ ಬ್ರಿಟಿಷರ ಕೈಮೇಲಾಗಿ ಡೊಂಬ ಹೆಗ್ಗಡೆಯು ಸೆರೆಸಿಕ್ಕು ಕೊಲ್ಲಲ್ಪಟ್ಟನು. ಅವನ ಸ್ವಾತಂತ್ರ್ಯಪ್ರಿಯತೆ ಮತ್ತು ರಾಷ್ಟ್ರಭಕ್ತಿ ಇತರರಿಗೆ ಮಾರ್ಗದರ್ಶಿಯಾಗಿದೆ.


 -ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ

rajsundar1957@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಿಮಾನ ಹೈಜಾಕ್ ಬೆದರಿಕೆ ಎಚ್ಚರಿಕೆ: ಫ್ರಾಂಕ್‌ಫರ್ಟ್‌- ದೆಹಲಿ Air India ಜೈಪುರದಲ್ಲಿ ಎಮೆರ್ಜೆನ್ಸಿ ಲ್ಯಾಂಡಿಂಗ್

ಬಿಹಾರದ ವೈಶಾಲಿಯಲ್ಲಿ ದೋಣಿ ಮುಳುಗಿ ಕನಿಷ್ಠ 13 ಮಂದಿ ಸಾವು; ಪ್ರಧಾನಿ ಮೋದಿ ಸಂತಾಪ, ಪರಿಹಾರ ಘೋಷಣೆ; Video

ಬಿಹಾರದ ಯುವಕನ ಜೊತೆ ಪ್ರೀತಿ, ಮದುವೆಗೆ ಸಿದ್ಧತೆ; ತಾಯಿ ಸಲಹೆ ಬೆನ್ನಲ್ಲೇ ನಿರ್ಧಾರ ಬದಲಿಸಿದ ಬೆಂಗಳೂರು ಟೆಕ್ಕಿ.. ಆಗಿದ್ದೇನು?

'ಜಂತರ್ ಮಂತರ್‌'ಗೆ ಅಕ್ರಮ ಪ್ರವೇಶ ಆರೋಪ: ಮುನ್ನೆಚ್ಚರಿಕೆ ಕ್ರಮವಾಗಿ CJPಯ ರಂಕಾ, ದಾಸ್, ಶಿಂಧೆ ಬಂಧನ

‘ರಾಹುಲ್ ಗಾಂಧಿ ನನ್ನನ್ನು ಪಕ್ಕಕ್ಕೆ ತಳ್ಳಿಲ್ಲ,ಕಾಳಜಿ ವಹಿಸಿದರು, ಬಿಜೆಪಿಯವರಿಗೆ ನನ್ಮೇಲೆ ತುಂಬಾ ಪ್ರೀತಿ’: CM ಡಿ.ಕೆ. ಶಿವಕುಮಾರ್; Video