ಸರ್ವಸಂಗ ಪರಿತ್ಯಾಗಿ ಸನ್ಯಾಸಿಗಳಿಗೇಕೆ ಹಣ, ಅಧಿಕಾರದ ಆಸೆ?
ಓಂಚನ್ನೇಶ್ ಅರಬಿಳಚಿಕ್ಯಾಂಪ್, ಭದ್ರಾವತಿ, 9901257131
ಸರ್ವಸಂಗ ಪರಿತ್ಯಾಗಿ ಸನ್ಯಾಸಿಗಳಿಗೇಕೆ ಹಣ, ಅಧಿಕಾರದ ಆಸೆ?
ನಿತ್ಯ ಅನಂದಪಡೆದು ಆನಂದಮಯಿ ಆಗುವವರನ್ನು ಪರಿತ್ಯಾಗಿ ಎಂದು ಕರೆಯಲಾಗದು.
ವಿ. ಹೇಮಂತಕುಮಾರ, ಬೆಂಗಳೂರು, 9035992900
ಇಲ್ಲೊಬ್ಬ ಹುಡುಗಿ ನನ್ನ ಕಂಡಕೂಡಲೇ ಚಾಕಲೇಟ್ ಬಾಯ್ ಎನ್ನುತ್ತಾಳಲ್ಲ?
ಚಿಕ್ಕವನಿರುವಾಗ ಅವಳ ಚಾಕಲೇಟ್ ಕಸಿದುಕೊಂಡಿದ್ದನ್ನು ಇನ್ನೂ ಮರೆತಿಲ್ಲ ಅನ್ಸುತ್ತೆ!
ಸಿ. ನಾಗರಾಜ, ಅರದೋಟ್ಲು, ಭದ್ರಾವತಿ
ಹುಡುಗಿ ಕನ್ಯೆಯಾಗಿರುವಾಗ ಪಾರಿವಾಳವಾಗಿರುತ್ತಾಳೆ. ಹೆಂಗಸಾದ ಮೇಲೆ?
ಗಿಡುಗನ ಕೈಲಿ ಸಿಕ್ಕ ಪಾರಿವಾಳ!
ಕಾಲ್ಸೆಂಟರ್ ಶಿವಕುಮಾರ, ರಾಮನಗರ
ಅರ್ಹತೆಯುಳ್ಳವರಿಗೆ ಸಹಾಯ ಮಾಡದ ಜನ, ಸೌಂದರ್ಯ ಇರುವವರಿಗೆ ಸಹಾಯ ಮಾಡಲು ಮುಂದೆ ಬರುತ್ತಾರಲ್ಲ?
ಅದಷ್ಟೇ ಅವರ ಅರ್ಹತೆ!
ತಲವಾಟ ಮಂಜುನಾಥ, ಸಾಗರ 9480931611
ಈಗಿನ ಹುಡುಗಿಯರು ಎತ್ತರದ ಚಪ್ಪಲಿ, ಅರ್ಧಂಬರ್ಧ ಉಡುಗೆ ಧರಿಸುವುದೇಕೆ?
ಅದನ್ನೂ ಧರಿಸಬೇಡಿ ಅನ್ನೋಕಾಗುತ್ತಾ?
-ಬಾಣಭಟ್ಟ