ವಿದೇಶಿಯರಿಗಿರುವ ಕನ್ನಡ ವ್ಯಾಮೋಹ ಕನ್ನಡಿಗರಿಗೇಕಿಲ್ಲ?
ನಂದಿನಿ ಎಸ್, ಭಾರತೀ ಕಾಲೇಜು
ವಿದೇಶಿಯರಿಗಿರುವ ಕನ್ನಡ ವ್ಯಾಮೋಹ ಕನ್ನಡಿಗರಿಗೇಕಿಲ್ಲ?
ಹಚ್ಚೇವು ಕನ್ನಡದ ದೀಪ, ಬುಡದಲ್ಲಿ ಕತ್ತಲು ಪಾಪ!
ಎಂ. ಬಿ. ಕೃಷ್ಣಮೂರ್ತಿ, 9449130531
ಮಂತ್ರಶಕ್ತಿಯಿಂದಲೂ ಹೆಣ್ಣನ್ನು ಒಲಿಸಿಕೊಳ್ಳುವಂತಿದ್ದರೆ?
ಆಗಲ್ಲ ಅಂದಿದ್ಯಾರು ಮುಂಡೇವಾ ಅಂತ ಯಾರೋ
ಕಿರುಚಿದ್ದಾರೆ!
ಓಂ ಚೆನ್ನೇಶ್ ಅರಬಿಳಚಿಕ್ಯಾಂಪ್, 9901257131
ಮನೆಗೂ ಮಠಕ್ಕೂ ಇರುವ ವ್ಯತ್ಯಾಸವೇನು?
ಇತ್ತೀಚೆಗೆ ವ್ಯತ್ಯಾಸ ಹುಡುಕುವುದು ಕಷ್ಟವಾಗಿದೆ ಅನ್ನೋದು ಖರೆ.
ಬಸವನಗೌಡ ಹೆಬ್ಬಳಗೆರೆ
ಗರ್ಲ್ಫ್ರೆಂಡ್ಗೂ ಲವರ್ಗೂ ಇರೋ ವ್ಯತ್ಯಾಸವೇನು?
ಹಿಂಗೆಲ್ಲ ವ್ಯತ್ಯಾಸ ತಿಳಿಯೋದ್ರಲ್ಲೇ ನಮ್ಮ ಹೈಕಳ ಯೌವನ ಜಾರಿಹೋಗ್ತಿದೆ ಅಂತ ಬೇಜಾರು!
ಸಿ ನಾಗರಾಜ, ಅರದೋಟ್ಲು, ಭದ್ರಾವತಿ
ಸ್ತ್ರೀಯು ಮಾತೆಯಾಗಿ ಶಕ್ತಿದಾತೆ, ಪತ್ನಿಯಾಗಿ?
ನಿಮ್ಮ ಶಕ್ತಿ ಎಷ್ಟಿದೆಯೆಂಬುದನ್ನು ಅಳೆಯುವ ಮಾಪಕ!
ಬಾಣಭಟ್ಟ