ಭೈರಪ್ಪನವರ ಜನಪ್ರಿಯತೆ ನೋಡಿ ನಾಡಿಯವರಿಗೇಕೆ ಒಡಲುರಿ?
ಕೆ.ಎಂ. ಲಿಂಗರಾಜು, ನಂಜನಗೂಡು, 9916021365
ಭೈರಪ್ಪನವರ ಜನಪ್ರಿಯತೆ ನೋಡಿ ನಾಡಿಯವರಿಗೇಕೆ ಒಡಲುರಿ?
ಓದುಗರ ನಾಡಿಮಿಡಿತ ಅರಿಯದ್ದರ ಪರಿಣಾವಿದು!
ತಲವಾಟ ಮಂಜುನಾಥ, ಸಾಗರ, 9480931611
ನೀರಲ್ಲಿ ಮುಳುಗಿದರೆ ಉಸಿರು ಕಟ್ಟುತ್ತೆ. ಅದೇ ರಾಜಕೀಯದಲ್ಲಿ ಮುಳುಗಿದರೆ?
ಅಲ್ಲೂ ಪಕ್ಷಾಂತರ ಮಾಡುವ ಮೊದಲು ಪಕ್ಷದಲ್ಲಿ ಉಸಿರುಗಟ್ಟಿಸುವ ವಾತಾವರಣ ಇದೆ ಎಂದು ಹೇಳುವುದನ್ನು ಕೇಳಬಹುದು.
ರವಿಕುಮಾರ ಜಿ.ಬಿ., 9449669897
ಗಂಡು ತಾಳಿಕಟ್ಟುವಾಗ ಹೆಣ್ಣು ತಲೆತಗ್ಗಿಸುವುದೇಕೆ?
ತಾಳಿ ಹೇಗಿದೆ ಎಂದು ನೋಡಲು!
ಆಶಾ ಎಸ್. ಹುಣಸಘಟ್ಟ, ಹೊನ್ನಾಳಿ
ಹಿಂದಿನ ಋಷಿಮುನಿಗಳಿದ್ದಂತೆ ಇಂದಿನ ಸ್ವಾಮೀಜಿಗಳಿಗೂ ಶಾಪ ಕೊಡುವ ಶಕ್ತಿಯಿದ್ದಿದ್ರೆ?
ಅದೊಂದು ಶಕ್ತಿ ಇದ್ದಿದ್ರೆ ಈ ಮೀಡಿಯಾದವರನ್ನೆಲ್ಲ ನನ್ನ ಸೇವೆಗೆ ಇಟ್ಕೋತಿದ್ದೆ ಅಂದ್ನಂತೆ ಬಿಡದಿ ನಿತ್ಯ!
ವಿ. ಹೇಮಂತಕುಮಾರ, ಬೆಂಗಳೂರು, 9035992900
ಬೆಳದಿಂಗಳ ರಾತ್ರಿಯಲ್ಲಿ ತಾಯಿ ಕೊಡುತ್ತಿದ್ದ ಕೈತುತ್ತಿಗೂ, ಪತ್ನಿ ಕೊಡುತ್ತಿರುವ ತುಟಿ ಮುತ್ತಿಗೂ ವ್ಯತ್ಯಾಸವೇನು?
ಕೈತುತ್ತು ಹಾಯಾಗಿ ಮಲಗಿಸುತ್ತೆ. ತುಟಿಮುತ್ತು ಎಬ್ಬಿಸುತ್ತೆ!
ಬಾಣಭಟ್ಟ