ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಬೆಕ್ಕು ಅಡ್ಡಬಂದರೆ ಅಪಶಕುನ ಎನ್ನುವ ಜನರೇ ಮನೆಯಲ್ಲಿ ಬೆಕ್ಕು ಸಾಕುವುದೇಕೆ?

Mainashree
Updated On : 28 Jan 2014, 9:49 am

ವಿ. ಹೇಮಂತಕುಮಾರ, ಬೆಂಗಳೂರು, 9035992900
ಬೆಕ್ಕು ಅಡ್ಡಬಂದರೆ ಅಪಶಕುನ ಎನ್ನುವ ಜನರೇ ಮನೆಯಲ್ಲಿ ಬೆಕ್ಕು ಸಾಕುವುದೇಕೆ?
ತಮಗಾಗದವರಿಗೆ ಅಡ್ಡ ಬರಲಿ ಅಂತ!

ಫ್ಯಾಷನ್ ಡಿಸೈನರ್ ಮಧು, 9945737427
ಹೆಣ್ಣಿಗೆ ಹೋಲಿಸಿದರೆ ಪ್ರೀತಿಯ ವಿಷಯದಲ್ಲಿ ಗಂಡು ಮೊದಲು ಸೋತು ಶರಣಾಗಿಬಿಡುತ್ತಾನಂತೆ?
ಅದು ಬಿಟ್ಟು ಬೇರೆ ಆಯ್ಕೆಯೇ ಇಲ್ಲವಲ್ಲ!

ಕಾಳಿದಾಸ, ರಾಮಕೃಷ್ಣನಗರ, 9141852066
ಬಿಸಿಲಿಗೆ ಛತ್ರಿ ಹಿಡಿಯುವ ಹುಡುಗಿಯರು ಮಳೆಯಲ್ಲಿ ನೆನೆಯುತ್ತಾರಲ್ಲಾ?
ಬಿಸಿಲಿಗೆ ಸೌಂದರ್ಯ ಕುಂದುತ್ತೆ. ಮಳೆಯಲ್ಲಿ ನೆನೆದರೆ ಸೌಂದರ್ಯ ಹೆಚ್ಚಾಗಿ ಕಾಣುತ್ತೆ.

ಎಂ.ಎಸ್. ಮಂಜುನಾಥ್ ಅಣಜಿ, ಹೊನ್ನಾಳಿ ದಾವಣಗೆರೆ
ನಾನು, ನನ್ನದು ಎನ್ನುವುದನ್ನು ಬಿಟ್ಟು ಭಗವಂತನ ಅಧೀನ ಎಂದು ಭಾವಿಸಿ ಸರಳವಾಗಿರಬೇಕು ಎನ್ನುವ ಜ್ಯೋತಿಷಿಗಳು ಕೈಬೆರಳುಗಳ ತುಂಬಾ ಬಂಗಾರದ ಉಂಗುರಗಳನ್ನೇ ಧರಿಸಿಕೊಂಡಿರುತ್ತಾರಲ್ಲ?
ಅದೆಲ್ಲ ಭಗವಂತನ ಕೃಪೆ!

ಡಬ್ಲ್ಯು.ಕೆ. ವೆಂಕಟೇಶಮೂರ್ತಿ, ಭೂಪಸಂದ್ರ, ಬೆಂಗಳೂರು
ಆಫೀಸಿನಲ್ಲಿ ನೌಕರರು ನಿದ್ದೆ ಮಾಡಿದರೆ ತಪ್ಪು. ಎಂಎಲ್‌ಎ ಮತ್ತು ಎಂಪಿಗಳು ಸಂಸತ್ತಿನಲ್ಲಿ ನಿದ್ದೆ ಮಾಡಿದರೆ?
ಅದು ಸಾರ್ವಜನಿಕ ಚಿಂತನೆಯ ಶೈಲಿ.

 ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement