ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಇದಲ್ಲವೇ ಮಕ್ಕಳ ಶೋಷಣೆ?

ರಾಜ್ಯದಲ್ಲಿ ಲಕ್ಷಾಂತರ ಮಕ್ಕಳು ಉತ್ತಮ ವಿದ್ಯಾಭ್ಯಾಸಕ್ಕಾಗಿ ಪ್ರತಿಷ್ಠಿತ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಕಲಿಯುತ್ತಿದ್ದಾರೆ....

Rashmi Kasaragodu
Updated On : 30 Jan 2014, 12:57 pm

ರಾಜ್ಯದಲ್ಲಿ ಲಕ್ಷಾಂತರ ಮಕ್ಕಳು ಉತ್ತಮ ವಿದ್ಯಾಭ್ಯಾಸಕ್ಕಾಗಿ ಪ್ರತಿಷ್ಠಿತ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಕಲಿಯುತ್ತಿದ್ದಾರೆ. ಪ್ರತಿಷ್ಠೆಗೋ, ಆಂಗ್ಲ ಭಾಷಾ ವ್ಯಾಮೋಹಕ್ಕೋ ತಮ್ಮ ಎಳೆಯ ಮಕ್ಕಳನ್ನು ಪಾಲಕರು ಲಕ್ಷಾಂತರ ರೂಪಾಯಿ ಕೊಟ್ಟು ಇಂತಹ ಖಾಸಗಿ ಶಾಲೆಗಳಿಗೆ ಹಚ್ಚಿರುತ್ತಾರೆ. ತಮ್ಮ ಶಾಲೆ ಎಲ್ಲರಿಗಿಂತ ವಿಶೇಷವೆಂದು ತೋರಿಸಲು ಇಂತಹ ಶಾಲೆಯ ಆಡಳಿತ ಮಂಡಳಿಗಳು ಮಕ್ಕಳಿಗೆ ಅವರ ಸಾಮರ್ಥ್ಯಕ್ಕೆ ಮೀರಿ ಪ್ರತಿದಿನ 5ರಿಂದ 20 ಪುಟಗಳವರೆಗೆ ಹೋಂ ವರ್ಕ್ ನೀಡುತ್ತಿದ್ದಾರೆ. ಜೊತೆಗೆ ಮಕ್ಕಳ ಮೇಲೆ ಕನಿಷ್ಠ 10ರಿಂದ 20 ಕೆ.ಜಿ. ಭಾರ ಹೊರುವಷ್ಟು ಸ್ಕೂಲ್ ಬ್ಯಾಗ್‌ಗಳಲ್ಲದೆ ಬೇರೆ ಬೇರೆ ಪುಸ್ತಕ/ನೋಟ್‌ಬುಕ್‌ಗಳನ್ನು ಪ್ರತಿದಿನ ಹೊತ್ತು ತರುವ ಶಿಕ್ಷೆ ವಿಧಿಸುತ್ತಿದ್ದಾರೆ. ಮೂರು ವರ್ಷದಿಂದ ಆರು ವರ್ಷದ ಮಕ್ಕಳಿಗೆ ಎಳೆಯ ಕಣ್ಣುಗಳ ಮೇಲೆ ಪರಿಣಾಮ ಬೀರುತ್ತದೆ ಎನ್ನುವ ಅರಿವಿದ್ದರೂ ಕೂಡ ಕಂಪ್ಯೂಟರ್ ಕಲಿಕೆಯ ಹೆಸರಿನಲ್ಲಿ ಅವರನ್ನು ಸೋಡಾ ಗ್ಲಾಸ್ ಹಾಕುವಷ್ಟರ ಮಟ್ಟಿಗೆ ದೈಹಿಕವಾಗಿ ಶೋಷಿಸುತ್ತಿದ್ದಾರೆ. ನೀರಿಳಿಯದ ಗಂಟಲಲ್ಲಿ ಕಡಬು ತುರುಕಿದಂತೆ ಎಳೆಯ ಮಕ್ಕಳಿಂದ ಪ್ರತಿ ತಿಂಗಳು ಪ್ರಾಜೆಕ್ಟ್ ವರ್ಕ್ ಎಂದು ಹೇಳಿ ಪಾಲಕರಿಂದಲೂ ಒಂದಿಷ್ಟು ಹಣ ಕೀಳುತ್ತಿದ್ದಾರೆ. ಹಗಲು ದರೋಡೆಯ, ಮಕ್ಕಳ ಹಕ್ಕುಗಳ ಇಂತಹ ಉಲ್ಲಂಘನೆಯ ಬಗ್ಗೆ ಪಾಲಕರಾಗಲೀ, ಶಿಕ್ಷಣ ತಜ್ಞರಾಗಲೀ, ಶಿಕ್ಷಣ ಮಂತ್ರಿಗಳಾಗಲೀ ಏಕೆ ಕ್ರಮಕೈಗೊಳ್ಳುತ್ತಿಲ್ಲ ತಿಳಿಯದಾಗಿದೆ.
-ಶ್ರವಣಕುಮಾರ್ ರಾಯ್ಕರ್, ಗಂಗಾವತಿ

ಇಬ್ಬಗೆ ನೀತಿ
ಹಂಪಿ ಕನ್ನಡ ವಿಶ್ವವಿದ್ಯಾಲಯ ಒಂದೇ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಸಾರಾಂಗದ ಮೂಲಕ ಕೃತಿ ಪ್ರಕಟಿಸುವಾಗ ಒಂದು ನೀತಿಯನ್ನು ಮತ್ತು ವಿಶ್ವವಿದ್ಯಾಲಯ ತನ್ನ ಒಂದು ವನಕ್ಕೆ ಹೆಸರು ಇಡುವಾಗ ಇನ್ನೊಂದು ನೀತಿಯನ್ನು ಅನುಸರಿಸುವುದರ ಮೂಲಕ ಇಬ್ಬಗೆ ನೀತಿಯನ್ನು ಅನುಸರಿಸುತ್ತಿರುವುದು ಕಂಡು ಬರುತ್ತಿದೆ. ವಿಶ್ವವಿದ್ಯಾಲಯ ಮೂರು ಆವೃತ್ತಿಗಳಲ್ಲಿ ಪ್ರಕಟಿಸಿರುವ ಡಾ. ರಹಮತ್ ತರೀಕೆರೆಯವರ ಕರ್ನಾಟಕದ ಸೂಫಿಗಳು ಕೃತಿಯಲ್ಲಿ ಸೂಫಿ ಸರ್ಮಸ್ತನ ವಂಶಜ ರಿಯಾಸುದ್ದೀನ್ ಸರ್ಮಸ್ತನ ಮೌಖಿಕ ಹೇಳಿಕೆಯನ್ನು ರಹಮತ್ ತರೀಕೆರೆ ಕೃತಿಯಲ್ಲಿ ಕೊಮರಾಂ ಅಥವಾ ಕುಮಾರ ರಾಮ ಒಬ್ಬ ರಾಕ್ಷಸ ಎಂದೂ ಅವನನ್ನು ಸೂಫಿ ಸರ್ಮಸ್ತನ ಮಗಳು ತರ್ಕಿಷ್‌ಚಿ ಎಂಬ ಮುಸ್ಲಿಂ ಮಹಿಳೆ ಕೊಂದಳು ಎಂದು ಉಲ್ಲೇಖಿಸಿರುವುದನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸುವುದರ ಮೂಲಕ ಪರನಾರಿ ಸೋದರ ಕನ್ನಡದ ಗಂಡುಗಲಿ ಕುಮಾರರಾಮನ ತೇಜೋವಧೆಗೈಯ್ಯುವ ನೀತಿಯನ್ನು ಅನುಸರಿಸುತ್ತಿದೆ. ಇದೇ ವಿಶ್ವವಿದ್ಯಾಲಯ ತನ್ನ ಕ್ಯಾಂಪಸ್ಸಿನಲ್ಲಿರುವ ಒಂದು ವನಕ್ಕೆ 'ಕುಮಾರರಾಮ ವನ' ಎಂದು ನಾಮಕರಣ ಮಾಡಿ ನಾಮಫಲಕ ಅನಾವರಣ ಮಾಡುವ ಕಾರ್ಯ ಮಾಡಿದೆ. ವಿಶ್ವವಿದ್ಯಾಲಯ ಕುಮಾರ ರಾಮನನ್ನು ರಾಕ್ಷಸ ಎಂದು ಕರೆಯುವುದರ ಮೂಲಕ ಆತನ ತೇಜೋವಧೆಗೈಯುವುದು, ವನಕ್ಕೆ ಆತನ ಹೆಸರನ್ನು ಇಡುವುದರ ಮೂಲಕ ಸ್ಮರಿಸುವುದು ಈ ಇಬ್ಬಗೆ ನೀತಿಯನ್ನು ಅನುಸರಿಸುತ್ತಿದೆ.
-ಎಸ್. ಮಲ್ಲಿಕಾರ್ಜುನಪ್ಪ, ದಾವಣಗೆರೆ


ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement