ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಪತ್ರಪ್ರಭ

Mainashree
Updated On : 30 Jan 2014, 9:55 am

ಎಚ್ಚರ ವಹಿಸಬೇಕು
ಭಾರತೀಯ ರಿಸರ್ವ್ ಬ್ಯಾಂಕ್ 2005ಕ್ಕಿಂತ ಮೊದಲು ಮುದ್ರಿತವಾದ ಕರೆನ್ಸಿ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳಲು ನಿರ್ಧರಿಸಿರುವುದು ಸ್ವಾಗತಾರ್ಹ. ಇದರಿಂದ ನಗದು ರೂಪದಲ್ಲಿ ಕಾಳಧನವನ್ನು ಸಂಗ್ರಹಿಸಿಟ್ಟಿರುವ ಜನರು ಅದನ್ನು ಹೊರಗೆ ಹಾಕಲೇಬೇಕಾಗುತ್ತದೆ. ಹಾಗೆಂದು ಕಪ್ಪು ಹಣವೆಲ್ಲಾ ಹೊರಗೆ ಬರುತ್ತದೆ ಎಂದು ಹೇಳಲು ಅಸಾಧ್ಯ. ಏಕೆಂದರೆ ಬಹುಪಾಲು ಕಾಳಧನ ವಿದೇಶಿ ಬ್ಯಾಂಕುಗಳಲ್ಲಿ ಕೂಡಿಸಿ ಇಡಲಾಗಿದೆ. ಅವುಗಳನ್ನು ಹೊರಕ್ಕೆ ತರದ ಹೊರತು ಇಂತಹ ಕ್ರಮಗಳಿಂದ ಅಸಾಧ್ಯ. ಅದೇನೇ ಇರಲಿ ಈ ಕ್ರಮ ಜನಸಾಮಾನ್ಯರಿಗೆ ಸಮಸ್ಯೆ ತಂದೊಡ್ಡದಂತೆ ಎಚ್ಚರವಹಿಸಬೇಕು. ಬ್ಯಾಂಕುಗಳಲ್ಲಿ ನೋಟುಗಳ ವಿನಿಮಯವು ಸುಗಮವಾಗಿ ನಡೆಯುವಂತೆ ಮುತುವರ್ಜಿ ವಹಿಸಬೇಕು.
- ರವಿ ಶಣೈ, ಪುತ್ತೂರು. (ದ.ಕ.)
ಕೃಷಿಗೆ ಮಹತ್ವವಿರಲಿ
ಈ ಹಿಂದಿನ ಬಜೆಟ್‌ನಲ್ಲಿ ಮಂಡನೆಯಾದ ಯೋಜನೆಗಳಲ್ಲಿ ಕೆಲವು ಇನ್ನೂ ಜನರ ಬಳಿ ತಲುಪಿಲ್ಲ. ಆಗಲೇ 2014-15ರ ಬಜೆಟ್ ಕೂಡ ತಯಾರಾಗುತ್ತಿದೆ. ಈ ಬಾರಿಯಾದರೂ ಇಲ್ಲಸಲ್ಲದ ಜಾರಿಯಾಗದ ಯೋಜನೆಗಳಿಗಿಂತ ಕೃಷಿಗೆ ಹೆಚ್ಚು ಒತ್ತು ನೀಡಿ. ಕೃಷಿಯ ಅಭಿವೃದ್ಧಿಗಾಗಿ ಹೆಚ್ಚು ಪರಿಷ್ಕರಿಸಿದ ಬಜೆಟ್ ಮಂಡನೆಯಾಗಲಿ. ಈ ಹಿಂದೆ ಸರ್ಕಾರ ಕೃಷಿಗೆ, ಕೃಷಿಕರಿಗೆ ಅನೇಕ ಯೋಜನೆಗಳನ್ನು ತಂದರೂ ಆತ್ಮಹತ್ಯೆ ಮಾಡಿಕೊಳ್ಳುವ ರೈತರ ಸಂಖ್ಯೆ ಕಡಿಮೆಯಾಗಿರಲಿಲ್ಲ. ಎಷ್ಟು ಕಾಲ ಈ ದೇಶದಲ್ಲಿ ಕೃಷಿ ಸಮೃದ್ಧವಾಗಿರುತ್ತದೋ ಅಲ್ಲಿಯವರೆಗೆ ದೇಶ ಪ್ರಬಲವಾಗಿರುತ್ತದೆ. ಇಲ್ಲದಿದ್ದಲ್ಲಿ ನಮ್ಮ ದೇಶ ನೆಲ ಕಚ್ಚುವುದಂತೂ ಖಂಡಿತ. ಹಾಗಾಗಿ ಈ ಬಾರಿಯ ಬಜೆಟ್‌ನಲ್ಲಿ ಕೃಷಿಗೆ ಹೆಚ್ಚಿನ ಪ್ರಾಧಾನ್ಯವಿರಲಿ.
- ರಕ್ಷಿತಾ ಹೆಚ್, ವಿವೇಕಾನಂದ ಕಾಲೇಜು
ಯೋಗಕ್ಕೆ ಈ ಗತಿ ಬರಬಾರದಿತ್ತು
"ಬೋಲ್ಡ್ ಅಂಡ್ ನೇಕೆಡ್ ಯೋಗ" ಹೆಸರಿನಲ್ಲಿ ಅಮೆರಿಕದಲ್ಲಿ "ಪುರುಷರ ಬೆತ್ತಲೆ ಯೋಗ" ಭಾರಿ ಜನಪ್ರಿಯತೆ ಗಳಿಸಿ, ಇದೀಗ "ಸ್ತ್ರೀ -ಪುರುಷ ಸಹ ಬೆತ್ತಲೆಯೋಗ ತರಗತಿ" ಆರಂಭಿಸುವುದಾಗಿ ಯೋಗ ಸ್ಟುಡಿಯೋ ಒಡತಿ ತಿಳಿಸಿ, "ಬೆತ್ತಲೆ ಯೋಗ ಆರಾಮದಾಯಕ ಮತ್ತು ಆತ್ಮವಿಶ್ವಾಸ ವೃದ್ಧಿಸುವುದಕ್ಕಾಗಿ" ಎಂದು ಹೇಳಿರುವುದು ನ್ಯೂಯಾರ್ಕ್‌ನಿಂದ ವರದಿಯಾಗಿದೆ! "ಬೆತ್ತಲೆ ಯೋಗದಿಂದ ಅರಾಜಕತೆ ಮತ್ತು ಆತ್ಮವಿನಾಶವುಂಟಾಗಿ, ಅದು ಯೋಗವಾಗದೆ ರೋಗವಾಗುತ್ತದಷ್ಟೇ! ದೇಹ-ಮನಸ್ಸುಗಳಿಗೆ ಸಂಸ್ಕಾರ ನೀಡಿ ದೈಹಿಕ-ಮಾನಸಿಕ-ಆಧ್ಯಾತ್ಮಿಕ-ಹೀಗೆ "ಸರ್ವತೋಮುಖ ಆರೋಗ್ಯ" ಕಾಪಾಡುವ ಭಾರತೀಯ ಯೋಗಕ್ಕೆ ಇಂತಹ ದುರ್ಗತಿ ಬರಬಾರದಿತ್ತು!
- ನಾಗಾರ್ಜುನ ಸಾಗ್ಗೆರೆ, ತುಮಕೂರು

ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments