ವಿ. ಹೇಮಂತಕುಮಾರ, ಬೆಂಗಳೂರು, 9901739104
ಬಿಲ್ಲು ಹಿಡಿದವರೆಲ್ಲ ರಾಮನಲ್ಲವಂತೆ?
ವೇಟರ್ ಕೂಡ ಆಗಿರಬಹುದು!
ರಮೇಶ್ ಭಟ್ ಆವರ್ಸೆ, ಮೈಸೂರು, 9164276058
ಹುಡುಗರು ಪಾಸ್ ಆದ್ರೆ ಕಾಲೇಜ್, ಫೇಲ್ ಆದ್ರೆ ಗ್ಯಾರೇಜ್. ಹುಡುಗಿಯರು ಪಾಸಾದ್ರೆ ಕಾಲೇಜ್. ಫೇಲಾದ್ರೆ?
ಮ್ಯಾರೇಜ್!
ನೇರಲಗುಡ್ಡ ಶಿವಕುಮಾರ, ಶಿರಾ, 9480343742
ಯಾತ್ರೆಗೂ ಹಾಗೂ ಜಾತ್ರೆಗೂ ಇರುವ ಭಿನ್ನತೆ ಏನು?
ಯಾತ್ರೆ ಖಾಸಗಿ, ಜಾತ್ರೆ ಸಾರ್ವಜನಿಕ.
ಹರಳಹಳ್ಳಿ ಪುಟ್ಟರಾಜು, ಪಾಂಡವಪುರ, 9632838088
ಮಂತ್ರಕ್ಕೆ ಮಾವಿನಕಾಯಿ ಉದುರುವಂತಿದ್ದರೆ?
ತಾಕತ್ತಿದ್ರೆ ತೆಂಗಿನಕಾಯಿ ಉದುರಿಸ್ಲಿ ಅಂತಬುದ್ಧಿಜೀವಿಗಳು ಸವಾಲು ಹಾಕ್ತಿದ್ರು!
-ಬಾಣಭಟ್ಟ