ರಾಷ್ಟ್ರಭಾಷೆ ಎಂದು ಸುಳ್ಳೇ ನಂಬಿಸಲ್ಪಟ್ಟ ಭಾಷೆ
ಇದನ್ನು ಹಿಂದಿನಿಂದ ಮುಂದೆ ತರಲು ರಾಜಕಾರಣಿಗಳ ಮಂದೆಯೇ ಮುಂದಾಗಿದೆ
ಇದು ನಮ್ಮ 'ದೇಶದ ಭಾಷೆ'. ಆದರೆ ಇದನ್ನು ನಮ್ಮ 'ದೇಶಭಾಷೆ' ಎಂದರೆ ಮಾತ್ರ ಅದು ಸರಿಹೋಗದು
ತಮಿಳರನ್ನು ಏ್ಝಟಿಉ್ಝ ಹಿಪ್ಪೆ ಮಾಡುವ ಭಾಷೆ
ಬೆಂಗಳೂರಿನ ಕನ್ನಡಿಗರ ಪಾಲಿನ Step mother tongue
ಉಳಿದ ಭಾಷೆಗಳನ್ನು 'ಹಿಂದಿ'ಕ್ಕುವ ಸಲುವಾಗಿಯೇ ಹಿಂದಿ ಹೆಸರಿನಲ್ಲಿ ವಿವಾದ ಸೃಷ್ಟಿಯಾಗುತ್ತಿದೆ
ಕೆಲವರು ತಮ್ಮ ಇಂಗ್ಲಿಷ್ ಅಜ್ಞಾನವನ್ನು ಮರೆಮಾಚಲು ಮೊರೆ ಹೋಗುವ ಭಾಷೆ
'ಹಿಂದಿಯೊಂದು ರಾಷ್ಟ್ರ ಭಾಷೆ'. ಇದು ದೋಷಪೂರಿತ ವಾಕ್ಯ. 'ಹಿಂದಿ ರಾಷ್ಟ್ರದ ಭಾಷೆಗಳಲ್ಲಿ ಒಂದು' ಎಂದಾಗಬೇಕು
ಇದು ರಾಷ್ಟ್ರಭಾಷೆಯಾದರೆ ಹಿಂದೂಸ್ಥಾನ ಹಿಂದಿಸ್ಥಾನವಾಗುತ್ತದೆ
ಭಾಷೆಯ ಹೇರಿಕೆಯ ಮೂಲಕ ಹತ್ತಿಕ್ಕುವುದು ಮತ್ತು 'ಹಿಂದಿ'ಕ್ಕುವುದು ಕೆಲವರ ಉದ್ದೇಶ
ವಿಶ್ವನಾಥ ಸುಂಕಸಾಳ
vishwasunkasal@yahoo.com