ಸಿ.ನಾಗರಾಜ ಅರದೋಟ್ಲು, ಭದ್ರಾವತಿ
ಕನಸಿನಲ್ಲಿ ಹುಟ್ಟಿದ ಅದ್ಭುತ ಕವನ ಹಗಲಲ್ಲಿ ನೆನಪಾಗುವುದಿಲ್ಲವೇಕೆ?
ನೀವು ನೀಜವಾದ ಅರ್ಥದಲ್ಲಿ ಕನಸಿನ ಕವಿ!
ಹರಳಹಳ್ಳಿ ಪುಟ್ಟರಾಜು, ಪಾಂಡವಪುರ, 9632838088
ಎದುರಿಗೆ ಬಂದು ಮಾತನಾಡಲಾಗದ ಹೇಡಿಗಳು ಲ್ಯಾಂಡ್ಫೋನಿನಿಂದ ಅರಚುವುದೇಕೆ?
ಬೊಗಳೋ ನಾಯಿ ಕಚ್ಚೋದಿಲ್ಲ ಎಂಬುದನ್ನು ಸಾಬೀತು ಮಾಡಲು!
ಆರ್.ಸಿ. ಪರಶುರಾಮ, ಶಿಕಾರಿಪುರ, 9902203492
ರೈಲ್ವೆ ಸ್ಟೇಷನ್ನಿಗೂ ಪೊಲೀಸ್ ಸ್ಟೇಷನ್ನಿಗೂ ಏನು ವ್ಯತ್ಯಾಸ?
ಮೊದಲಿನದ್ದಕ್ಕೆ ಜನ ತಾವಾಗೇ ಬರುತ್ತಾರೆ. ಎರಡನೇಯದಕ್ಕೆ ಎಳೆದು ತರಬೇಕಾಗುತ್ತದೆ!
ರಮೇಶ್ ಹನುಮನಾಳು
ವಾಹನದಲ್ಲಿ ಎಲ್ಲವೂ ನಿನ್ನದೆ, ಎಲ್ಲ ನೀನೇ ಅಂತ ಬರೆದಿದೆ. ಅವಳ ಹೆಸರೇಕೆ ಬರೆದಿಲ್ಲ?
ಯಾರು ಬೇಕಾದರೂ ಅವರ ಹೆಸರು ಬರೆದುಕೊಳ್ಳಬಹುದು ಅಂತ ಅರ್ಥ!
-ಬಾಣಭಟ್ಟ