ಸಂಪಾದಕೀಯ

ಕಾನೂನಿಗಿಂತ ನಿನ್ನ ಸಂತೋಷ ಮುಖ್ಯ

1947ರ ಸಮಯದಲ್ಲಿ ಮಂಗಲ್‌ದಾಸ್. ವಿ.ದೇಸಾಯಿ ಮುಂಬೈಯ ಶ್ರೇಷ್ಠ ನ್ಯಾಯಾಲಯದ ನ್ಯಾಯಾಧೀಶರಾಗಿದ್ದರು. ಅದಕ್ಕೂ ಮೊದಲು ಅವರೊಬ್ಬ ಪ್ರಸಿದ್ಧ ನ್ಯಾಯವಾದಿಗಳಾಗಿ ಸೇವೆ ಸಲ್ಲಿಸಿದ್ದರು. ಸದಾ ಹಸನ್ಮುಖಿಗಳಾಗಿ, ಸ್ನೇಹಭಾವದಿಂದ ಮೊಕದ್ದಮೆಗಳ ವಿಚಾರಣೆ ನಡೆಸುತ್ತಿದ್ದರು. ದಾವೆಗಳನ್ನು ತಮ್ಮ ತಮ್ಮಲ್ಲೇ ತೀರ್ಮಾನಿಸಿಕೊಳ್ಳಲು ಸೂಕ್ತ ಸಲಹೆ ಅಥವಾ ಮಾರ್ಗದರ್ಶನ ಮಾಡುತ್ತಿದ್ದರು. ಅವರ ಮುಖ್ಯ ಉದ್ದೇಶ ಎಲ್ಲರಿಗೂ ಒಳಿತು ಮಾಡಬೇಕೆಂಬುದೇ ಆಗಿತ್ತು. ವ್ಯರ್ಥವಾಗಿ ಹಣ ವೆಚ್ಚಮಾಡಿಕೊಂಡು ದಾವೆಗಳಿಗಾಗಿ ಇಡೀ ಜೀವನ ಸವೆಸುವುದು ಅವರಿಗೆ ಬೇಕಿರಲಿಲ್ಲ. ನ್ಯಾಯಾಲಯದಲ್ಲಿ ಮಾತಿನ ಚಕಮಕಿ ನಡೆಸುವ ಕಕ್ಷಿದಾರರ ಮತ್ತು ವಕೀಲರ ನಡುವೆ ಸ್ನೇಹ ಕುದುರಿಸಲು ಯತ್ನಿಸುತ್ತಿದ್ದರೇ ವಿನಃ ಎಲ್ಲವೂ ಕಾನೂನಿಂದಲೇ ಬಗೆಹರಿಯುವುದೆಂಬುದರಲ್ಲಿ ಅವರಿಗೆ ನಂಬಿಕೆ ಇರಲಿಲ್ಲ. ಆಗ ವಕೀಲರಾಗಿದ್ದ ಕೆ.ಎಂ.ಮುನ್ಷಿ ಮತ್ತು ಮಂಗಲ್‌ದಾಸ್ ಮೊದಲಿನಿಂದಲೂ ಆತ್ಮೀಯ ಸ್ನೇಹಿತರಾಗಿದ್ದರು.
ಒಮ್ಮೆ ಕೆ.ಎಂ.ಮುನ್ಷಿಯವರು ಒಬ್ಬ ಮುಸ್ಲಿಂ ತರುಣಿಯ ಪರವಾಗಿ ದಾವೆ ಹೂಡಿದ್ದರು. ಅದೊಂದು ವಿವಾಹ ವಿಚ್ಛೇದನದ ಮೊಕದ್ದಮೆ. ಆಕೆ ಗಂಡನಿಂದ ವಿಚ್ಛೇದನ ಮತ್ತು ಮೆಹರ್‌ಗಾಗಿ ದಾವೆ ಹೂಡಿದ್ದಳು. ಅದು ನ್ಯಾಯಾಧೀಶ ಮಂಗಲ್‌ದಾಸ್ ಅವರ ಕೋರ್ಟ್‌ನಲ್ಲಿ ವಿಚಾರಣೆಗೆ ಬಂದಿತ್ತು. ನ್ಯಾಯಾಧೀಶರು ವಿಚ್ಛೇದನ ಬಯಸಿದ ತರುಣಿ ಮತ್ತವಳ ಪತಿಯನ್ನು ತಮ್ಮ ಕೊಠಡಿಗೆ ಕರೆಸಿಕೊಂಡು, ವಿವಾಹ ಜೀವನದ ಸೊಬಗಿನ ಬಗ್ಗೆ ವಿವರಿಸಿದರು. ಪತಿ ಪತ್ನಿ ಸಂಬಂಧದ ಪಾವಿತ್ರ್ಯತೆಯನ್ನು ಹಾಸ್ಯ ಚಟಾಕಿಗಳನ್ನು ಹಾರಿಸುತ್ತಾ ಅವರಿಬ್ಬರ ಮನಸ್ಸನ್ನು ತಿಳಿಗೊಳಿಸಲು ಪ್ರಯತ್ನಿಸಿದರು. ಅವರಿಬ್ಬರೂ ಸಂಘರ್ಷದ ದಾರಿಯನ್ನು ಬಿಟ್ಟು ಒಂದಾಗುವಂತೆ ಒತ್ತಾಯಿಸಿದರು. ಮರುದಿನ ಆ ತರುಣಿ ಮುನ್ಷಿಯವರ ಕಚೇರಿಗೆ ಬಂದು ಕೋಪದಿಂದ ನ್ಯಾಯಾಧೀಶರ ಬಗ್ಗೆ ದೂರಿದಳು. ತಾನು ವಿದ್ಯಾವಂತೆಯಾಗಿದ್ದು, ತಾನು ನ್ಯಾಯ ಬಯಸಿ ನ್ಯಾಯಾಲಯದ ಮೊರೆ ಹೋದರೆ, ನ್ಯಾಯಾಧೀಶರು ಸಾಂಸಾರಿಕ ಬದುಕಿನ ಬಗ್ಗೆ ಉಪನ್ಯಾಸ ನೀಡುತ್ತಾರೆ. ನನಗೆ ಬೇಕಾಗಿರುವುದು ವಿಚ್ಛೇದನವೇ ಹೊರತು ಉಪದೇಶವಲ್ಲ ಎಂದಳು. ಆಗ ಮುನ್ಷಿಯವರು ಶಾಂತಸ್ವರದಲ್ಲಿ ಹೇಳಿದರು, ನೀನು ಹೇಳಿದ್ದು ಸರಿಯಾಗಿಯೇ ಇದೆ. ನಿನ್ನ ಭಾವನೆಗಳನ್ನವರು ಏಕೆ ಅರ್ಥಮಾಡಿಕೊಳ್ಳುತ್ತಿಲ್ಲ ಎಂಬುದು ನನಗರ್ಥವಾಗುತ್ತಿದೆ. ನೀನು ನಿನ್ನ ಹಕ್ಕುಗಳ ಬಗ್ಗೆ ಯೋಚಿಸುತ್ತಿದ್ದೀಯ. ಆ ನ್ಯಾಯಾಧೀಶರು ನಿನ್ನ ಸಂತೋಷದ ಬಗ್ಗೆ ಆಲೋಚಿಸುತ್ತಿದ್ದಾರೆ.


- ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!