ಸಂಪಾದಕೀಯ

ಜಡೆ

= ಆಗಾಗ ಜಡಕು ಬೀಳುವಂಥದ್ದು ಮತ್ತು ಜಡಕು ಉಂಟು ಮಾಡುವಂಥದ್ದು
= ಕಟ್ಟಿದರೆ ವೇಣಿ ಸಂಹಾರ, ಕೆಟ್ಟರೆ ಸಂಹಾರ ವೇಣಿ
= ಇದು ಕೆಲವೊಮ್ಮೆ ಹಾವಿನಂತೆ, ಕೆಣಕಿದರೂ ಹಾವಿನಂತೆಯೇ
= ಹಿಂದಿನ ಕಾಲದ ಸ್ತ್ರೀಯರು ಇದನ್ನು ಹೊಂದಿರುತ್ತಿದ್ದರು. ಇದನ್ನು ಈಗ ಚಿತ್ರಗಳಲ್ಲಿ ಕಾಣಬಹುದು
= ಜಡೆಯ ಜಾಡು ಹಿಡಿಯುವುದು ಕಷ್ಟ ಕಷ್ಟ
= ಕೆಲವು ಜಡೆಗಳು ಕುದುರೆ ಬಾಲ, ಇನ್ನು ಕೆಲವು ಕತ್ತೆ ಬಾಲ. ಮತ್ತೊಂದಿಷ್ಟು ಇಲಿ ಬಾಲ
=     ಯುವಕರ ಜಡತ್ವವನ್ನು ಹೋಗಲಾಡಿಸಿ ಬಡಿದೆಬ್ಬಿಸುವ ಮಾಯೆ
=     ಎರಡು ಜಡೆ ಸೇರಿದರೆ ಸುದ್ದಿ, ಮೂರು ಸೇರಿದರೆ ಸುದ್ದಿ ಮತ್ತು ಸುದ್ದಿ, ನಾಲ್ಕು ಸೇರಿದರೆ ಸುದ್ದಿ, ಸುದ್ದಿ ಮತ್ತು ಸುದ್ದಿ
=     ಹೃದಯ ಹೃದಯಗಳನ್ನು ಜೋಡಿಸಿ ಕಸಿ ಮಾಡುವುದರಿಂದ ಇದಕ್ಕೆ ಜಡೆ ಎಂದು ಹೆಸರು
    ಅಳಿವಿನಂಚಿನಲ್ಲಿರುವ ಪ್ರಭೇದ
= ಮಸೂರ ಹಿಡಿದು ನೋಡಿದರೆ ಜಡೆಯ ಪಳೆಯುಳಿಕೆ ಕಾಣಬಹುದು
= ಎರಡು ಜಡೆ ಸೇರಿದರೆ ಜಗಳ ಎನ್ನುತ್ತಾರೆ. ಅದು ಸುಳ್ಳು. ಎರಡು ಸೇರಲೇಬೇಕೆಂದೇನೂ ಇಲ್ಲ
= ಸುಂದರಿಯೆಂಬ ದರಿಯೊಳಗೆ ದೂಡುವಂಥದ್ದು
= ಸಂಸಾರದ ಜಂಜಡಗಳನ್ನು ಒಂದು ಕ್ಷಣ ಇಲ್ಲವಾಗಿಸುವಂಥದ್ದು


-ವಿಶ್ವನಾಥ ಸುಂಕಸಾಳ
vishwasunkasal@yahoo.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!