ಜಾತರೆಲ್ಲರ ಜೊತೆಯಲ್ಲೇ ಬರುವ ಮತ್ತು ಇರುವ ಜಾಠರಾಗ್ನಿಯ ಸಂತಾನ.
ಬಾಯ್ಕಳೆದು ದುರುಗುಟ್ಟುವ ಬಕಾಸುರನ ಬರಗೆಟ್ಟ ಮಿತ್ರ
ಹೊಟ್ಟೆಯ ಕಿಚ್ಚಿನ ಪರಿಣಾಮ
ವಾಸಿಯಾಗದ ಈ ಖಾಯಿಲೆಗೆ ಆಹಾರವೆಂಬ ಮಾತ್ರೆಯನ್ನು ಹೊತ್ತು ಹೊತ್ತಿಗೂ ತೆಗೆದುಕೊಳ್ಳಬೇಕು
ಹಸಿದಾಗ ಎಲ್ಲರೂ ಹೆಬ್ಬುಲಿಯೇ
ನಾವು ಆಹಾರವನ್ನು ತಿನ್ನುತ್ತೇವೆ. ಹಸಿವು ನಮ್ಮನ್ನೇ ತಿನ್ನುತ್ತದೆ
ಹಸಿವಿನ ಹಸಿವು ಯಾವತ್ತೂ ಇಂಗುವುದಿಲ್ಲ
ಜೀವನವೇ ಅಂತಿಮ ಪಾಠಶಾಲೆ. ಹಸಿವೆ ತಾನೇ ಇಲ್ಲಿ ಗುರುವು
ಸುಧೆಯೊಂದೇ ಕ್ಷುಧೆಯ ಬಾಧೆ ಹಿಂಗಿಸುವುದೆಂಬುದು ವಿಬುಧರ ಮಾತು
ತಿನ್ನುವಿಕೆ ಎಂಬ ಕ್ರಿಯಾಪದದ ಮೂಲ 'ಧಾತು'
ಜೀವಿಗಳನ್ನು ಹಸಿಯಾಗಿಡುವ ವಿಷಯ
ಹೊಟ್ಟೆಪಾಡು ಎಂಬ ಕಲ್ಪನೆಯ ಪ್ರವರ್ತಕ
ಮನುಷ್ಯನನ್ನು ತನಗೆ ಬೇಕಾದಂತೆ ಕುಣಿಸುವ ಏಕೈಕ ಸೂತ್ರಧಾರ
ಕಿಸೆ ಖಾಲಿ ಆಗಿರುವಾಗಲೇ ಹೆಚ್ಚು ಹಸಿವಾಗುತ್ತದೆ
ವಿಶ್ವನಾಥ ಸುಂಕಸಾಳ
vishwasunkasal@yahoo.com