ಸಂಪಾದಕೀಯ

ಆಗಾಗ ಸಾಹಿತಿಗಳ ಚಾಟಿ ಏಳು ಬೀಳಬೇಕು

ಬದರೀ ನಾರಾಯಣ್ ಅಯ್ಯಂಗಾರ್ ಒಬ್ಬ ಸಜ್ಜನ ರಾಜಕಾರಣಿಯಾಗಿ, ದೇವರಾಜ ಅರಸ್ ಅವರ ಸಂಪುಟದಲ್ಲಿ ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದವರು. ಸಾಗರದ ಬಳಿಯ ಆನಂದಪುರದವರಾದ ಅವರು ಭಾರೀ ಶ್ರೀಮಂತರು, ಭೂಮಾಲೀಕರು ಮತ್ತು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಆದರೆ ರಕ್ತಗತವಾಗಿದ್ದ ಶ್ರೀಮಂತಿಕೆಯ ಗತ್ತು ಸ್ವಲ್ಪವೂ ಅವರಲ್ಲಿ ಇರಲಿಲ್ಲ. ತಮ್ಮ ಬಹುತೇಕ ಭೂಮಿಯನ್ನು ಭೂರಹಿತರಿಗೆ ಮತ್ತು ಗೇಣಿದಾರಿಗೆ ಬಿಟ್ಟುಕೊಟ್ಟು ಮಾದರಿಯಾಗಿದ್ದರು.
ತ.ರಾ.ಸು. ಶಿವಮೊಗ್ಗಕ್ಕೆ ಒಮ್ಮೆ ಸಮಾರಂಭವೊಂದಕ್ಕೆ ಆಗಮಿಸಿದ್ದರು. ಅದೇ ಸಮಯದಲ್ಲಿ ವೀರೇಂದ್ರ ಪಾಟೀಲರ ಸಂಪುಟ ಉರುಳಿತ್ತು. ಅದಕ್ಕೆ ಕಾರಣರಾದವರಲ್ಲಿ ಒಬ್ಬರು ಎಂದು ಬದರೀನಾರಾಯಣ್ ಅವರನ್ನು ಸಾರ್ವಜನಿಕ ಸಭೆಯೊಂದರಲ್ಲಿ ಕಟುವಾಗಿ ಟೀಕಿಸಿ ಮಾತನಾಡಿದರು. ನಂತರ ಬದರೀನಾರಾಯಣ ಅಯ್ಯಂಗಾರರು ಶಿಕ್ಷಣ ಸಚಿವರಾಗಿದ್ದಾಗ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿದ್ದರು. ಆಗ ಕುಲಪತಿಗಳಾಗಿದ್ದವರು ದೇ.ಜವರೇಗೌಡರು. ತ.ರಾ.ಸು. ಸೆನೆಟ್ ಸದಸ್ಯರಾಗಿದ್ದರು. ಉಪಹಾರ ಕೂಟಕ್ಕೆ ಆಹ್ವಾನ ಬಂದಾಗ ಅದರಲ್ಲಿ ಭಾಗವಹಿಸುವುದೋ, ಬೇಡವೋ ಎಂದು ಜಿಜ್ಞಾಸೆಯಲ್ಲಿದ್ದ ತ.ರಾ.ಸು., ಸಚಿವರ ಕಣ್ಣಿಗೆ ಬೀಳದಂತೆ ಎಚ್ಚರ ವಹಿಸಿದ್ದರು. ಅದನ್ನು ಗಮನಿಸಿದ ಜವರೇಗೌಡರು ಹತ್ತಿರ ಕರೆದು ಬದರೀನಾರಾಯಣ್ ಅವರಿಗೆ ಪರಿಚಯಿಸಿದರು. ತ.ರಾ.ಸು ಅವರನ್ನು ನೋಡಿದ ಕೂಡಲೇ "ನಿಮಗಿನ್ನೂ ನಾನು ಕನ್ನಡದ ದ್ರೋಹಿ ಎಂದು ಅವಿಶ್ವಾಸವೆ? ಈ ರಾಜಕೀಯ, ಸಚಿವ ಪದವಿಗಿಂತ ಕನ್ನಡ ದೊಡ್ಡದು. ಅದಕ್ಕಾಗಿ ನಿಮ್ಮ ಸಹಕಾರ ಬೇಕು. ನೀವು ಏನೋ ಅನುಮಾನ ಇಟ್ಟುಕೊಂಡು ದೂರ ಇದ್ದರೆ ಹೇಗೆ?" ಎಂದು ಕಳಕಳಿಯಿಂದ ಕೇಳಿದರು. ಅವರ ಮಾತನ್ನು ಕೇಳಿ ಹಿಂದೆ ಶಿವಮೊಗ್ಗದ ಭಾಷಣದಲ್ಲಿ ಬಳಸಿದ್ದ  ತಮ್ಮ ಭಾಷೆಯ ಬಗ್ಗೆ ಪಶ್ಚಾತ್ತಾಪವಾಯಿತು. ಆ ದಿನ ನಾನು ಬಳಸಿದ್ದು ಉದ್ರೇಕದ ಭಾಷೆ ಎಂದು ವಿಷಾದ ವ್ಯಕ್ತಪಡಿಸಿದರು. ಬದರಿಯವರು ಅದಕ್ಕಾಗಿ ಪಶ್ಚಾತ್ತಾಪ ವ್ಯಕ್ತಪಡಿಸುವುದು ಅನಗತ್ಯವೆಂದೂ, ಆಗಾಗ್ಗೆ ಸಾಹಿತಿಗಳ ಚಾಟಿ ಏಟು ಬೀಳದಿದ್ದರೆ, ಅಧಿಕಾರ ಸ್ಥಾನದಲ್ಲಿ ಕುಳಿತ ಜನರಿಗೆ ಎಚ್ಚರ ಬರುವುದು ಕಷ್ಟ ಎಂದು ಸಮಾಧಾನ ಪಡಿಸಿದರು.


- ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸತತ 3ನೇ ದಿನ SIR ವಿರುದ್ಧ ಪ್ರತಿಭಟನೆ: ರಾಜ್ ಘಾಟ್ ನತ್ತ ಇಂಡಿಯಾ ಬ್ಲಾಕ್ ಸಂಸದರ ಮೆರವಣಿಗೆ!

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ಚಿಕ್ಕಣ್ಣ, ಯಶಸ್ ಸೂರ್ಯಗೆ ಬಿಗ್ ಶಾಕ್‌; ಇಬ್ಬರಿಗೂ ಕೋರ್ಟ್ ಸಮನ್ಸ್

ಜಿಎಸ್‌ಟಿ ಮಂಡಳಿಯಿಂದ ಪ್ರಕ್ರಿಯೆ ಸುಧಾರಣೆಗಳಿಗೆ ಅನುಮೋದನೆ; ಬಂಧನದ ಅಧಿಕಾರಕ್ಕೆ ಕಡಿವಾಣ!

ಶಿಕಾರಿಪುರದ ಈ ಗ್ರಾಮದಲ್ಲಿ ಬೀಗರೂಟ ಹಾಕಿದ್ರೆ ₹1 ಲಕ್ಷ, ಉಂಡು ಬಂದ್ರೆ ₹50 ಸಾವಿರ ದಂಡ! ಇಲ್ಲಿದೆ ಸ್ಫೋಟಕ ಕಾರಣ...

ಫ್ರೀಡಂ ಪಾರ್ಕ್‌ನಲ್ಲಿ CJP ಪ್ರತಿಭಟನೆ: ಜ್ಞಾನೇಶ್ ಹೋದರೆ ಅಜ್ಞಾನೇಶ್ ಬರುತ್ತಾನೆ; ಮೊದಲು SIR ರದ್ದುಗೊಳಿಸಿ - ಪ್ರಕಾಶ್ ರಾಜ್