ಸಭೆಯಲ್ಲಿ ಕ್ಯಾಮೆರಾ ಕಣ್ಣಿಗೆ ಸಿಕ್ಕಿ ಬಿದ್ದರೂ 'ನಾನು ಮಲಗಿರಲಿಲ್ಲ' ಎಂದರು ಸಿದ್ದರಾಮಯ್ಯ. ತಮ್ಮ ನಾಯಕ ಪಪ್ಪು ಅವರಂತೆ ಏಕಾಗ್ರತೆಯಿಂದ ಯೋಚಿಸುತ್ತಿದ್ದಿರಬೇಕು!
- ಮೀಡಿಯಾ ಕ್ರೂಕ್ಸ್
ಎಎಪಿಯಲ್ಲಿ ಸ್ಥೈರ್ಯ ಎಷ್ಟು ಕಡಿಮೆಯಾಗಿದೆ ಎಂದರೆ ಕೇಜ್ರಿವಾಲ್ ಕೆನ್ನೆಗೆ ಬಾರಿಸಿದರೆ ಪ್ರಚಾರ ಸಿಗುತ್ತದೆ ಎಂದರೂ ಯಾವ ಸದಸ್ಯನೂ ಥಳಿಸಲು ಸಿದ್ದನಿಲ್ಲ.
- ದ ಬ್ಯಾಡ್ ಡಾಕ್ಟರ್
ಭಾರತೀಯರು ಎಂದರೆ- 'ಮದುವೆ ಆಗಿಲ್ಲವೇ? ಮದುವೆ ಆಗು! ಇನ್ನೂ ಮಕ್ಕಳಾಗಿಲ್ಲವೇ? ಮಗು ಹೆರು! ಒಂದೇ ಮಗುವೇ? ಇನ್ನೊಂದು ಮಗು ಹೆರು!'
- ಗೌತಮ್ ವರ್ಮಾ
ಶುಕ್ರವಾರ ಬಂದಾಗ ದೇವರನ್ನು ವಂದಿಸುವವರೇ ಸೋಮವಾರ ಬಂದಾಗ ದೇವರನ್ನು ಶಪಿಸುತ್ತಾರೆ!
- ಡ್ರಂಕನ್ ಟೆಕ್ಕಿ
ಫ್ಲಾಪ್ ಪುಸ್ತಕಗಳಲ್ಲಿ ಒಂದು- ಸೋನಿಯಾ ಗಾಂಧಿ ಬರೆದ 'ಡಾ. ಮನಮೋಹನ ಸಿಂಗ್, ದ ವಾಯ್ಸ್ ಆಫ್ ದ ನೇಷನ್'
- ಅಮಿತಿ ಎ.