ಸಂಪಾದಕೀಯ

ನಿವೃತ್ತಿವೇತನ ನಿರಾಕರಿಸಿದ ಡಿವಿಜಿ

ತಾವು ನಂಬಿದ ತತ್ವಗಳನ್ನು ಎಷ್ಟೇ ಕಷ್ಟ ಬಂದರೂ ಚಾಚೂ ತಪ್ಪದೆ ಪಾಲಿಸಿದವರ ಪೈಕಿ ಡಿ.ವಿ.ಜಿ. ಅವರು ಅಗ್ರಗಣ್ಯರಾಗಿದ್ದಾರೆ. ಕನ್ನಡದ ಭಗವದ್ಗೀತೆಯೆಂದೇ ಖ್ಯಾತವಾದ 'ಮಂಕುತಿಮ್ಮನ ಕಗ್ಗ' ವನ್ನು ನೀಡಿದ ದಾರ್ಶನಿಕರವರು. ಮೈಸೂರಿನ ದಿವಾನರುಗಳ ನಿಕಟ ಪರಿಚಯವಿಟ್ಟುಕೊಂಡಿದ್ದ ಡಿ.ವಿ.ಜಿ, ಎಂದಿಗೂ ತಮ್ಮ ಹಿತಕ್ಕಾಗಿ ಆ ಪರಿಚಯವನ್ನು ದುರುಪಯೋಗಪಡಿಸಿಕೊಳ್ಳಲಿಲ್ಲ. ಆಗಾಗ್ಗೆ ಇವರ ಸಲಹೆ ಪಡೆದ ವಿಶ್ವೇಶ್ವರಯ್ಯನವರು ಅದಕ್ಕಾಗಿ ನೀಡಿದ ಚೆಕ್‌ಗಳನ್ನು ಬ್ಯಾಂಕ್‌ಗೆ ಹಾಕದೇ, ಸ್ವಾಭಿಮಾನವನ್ನು ಮೆರೆದವರು. ತಮ್ಮ ಬಡತನವನ್ನೆಂದೂ ದೊಡ್ಡ ವಿಷಯವೆಂದು ಭಾವಿಸಿದವರೇ ಅಲ್ಲ. ಸಮಾಜ ಸೇವಕನೆಂದೂ ಪ್ರಚಾರ, ಹೆಸರು, ಗೌರವ ಮತ್ತು ಆರ್ಥಿಕ ಲಾಭಕ್ಕಾಗಿ ಆಸೆ ಪಡಬಾರದು ಎಂಬ ನಿಲವನ್ನು ಹೊಂದಿದ್ದ ನಿಷ್ಠಾವಂತರವರು. ತಮಗೆ ಸನ್ಮಾನ ಮಾಡಿ ನೀಡಿದ ಹಮ್ಮಿಣಿ ಹಣವನ್ನು ಗೋಖಲೆ ಸಂಸ್ಥೆಗೆ ನೀಡಿದ ಮಹಾ ಪುರುಷ. ಇಂತಹ ಶ್ರೇಷ್ಠ ವ್ಯಕ್ತಿ ಡಿವಿಜಿಯವರು ತಮ್ಮ ವೃದ್ಧಾಪ್ಯದಲ್ಲಿ ಆರ್ಥಿಕವಾಗಿ ತುಂಬಾ ಸೊರಗಿದ್ದರು. ತಮ್ಮ ಮಗ ಬಿ.ಜಿ.ಎಲ್ ಸ್ವಾಮಿಯವರು ಕಳುಹಿಸುತ್ತಿದ್ದ ಹಣವನ್ನೇ ಅವರು ಪೂರ್ಣ ಅವಲಂಬಿಸಿದ್ದರು. ಅವರ ತತ್ವನಿಷ್ಠೆಗೆ ನಿದರ್ಶನವಾದ ಈ ಘಟನೆ ಅವರ ಸ್ವಾಭಿಮಾನದ ಸಂಕೇತವಾಗಿ ಅವರ ಬಗ್ಗೆ ನಮಗಿರುವ ಗೌರವವನ್ನು ಹೆಚ್ಚಿಸಿದೆ:
ಕರ್ನಾಟಕ ಸರ್ಕಾರ 1970ರಲ್ಲಿ ಸಾಹಿತ್ಯ, ಸಂಗೀತ ಮತ್ತು ಕಲಾಕ್ಷೇತ್ರದಲ್ಲಿ ಅನುಪಮ ಸಾಧನೆ ಮಾಡಿದ ಸಾಧಕರಿಗೆ ನಿವೃತ್ತಿ ವೇತನ ನೀಡುವ ಯೋಜನೆಯನ್ನು ಜಾರಿಗೆ ತಂದಿತು. ಸರ್ಕಾರ ಸಿದ್ಧಪಡಿಸಿದ ಪಟ್ಟಿಯಲ್ಲಿ ಡಿ.ವಿ.ಗುಂಡಪ್ಪನವರ ಹೆಸರೂ ಇತ್ತು. ಅದು ಪತ್ರಿಕೆಯಲ್ಲಿಯೂ ಪ್ರಕಟವಾಯಿತು. ಅದನ್ನು ಗಮನಿಸಿದ ಡಿವಿಜಿಯವರಿಗೆ ಸಂತೋಷವಾಗುವುದರ ಬದಲು ಬೇಸರವಾಯತು. ಕೂಡಲೇ ಸರ್ಕಾರಕ್ಕೆ ಪತ್ರ ಬರೆದು, ಸಾರ್ವಜನಿಕ ಹಣದ ಮೇಲೆ ತಾವೆಂದೂ ಭಾರವಾಗಿರಲು ಇಚ್ಛಿಸುವುದಿಲ್ಲವೆಂದೂ, ತಮ್ಮ ಹೆಸರನ್ನು ಪಿಂಚಿಣಿದಾರರ ಪಟ್ಟಿಯಿಂದ ತೆಗೆದುಹಾಕಬೇಕೆಂದೂ ಹೇಳಿದರು.


- ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ

Sting operation ಮೂಲಕ ನಿಮ್ಮನ್ನು ಸಿಲುಕಿಸಲು ಯತ್ನಿಸಿರುವುದು ನಿಜವೇ ಆಗಿದ್ದರೆ ತನಿಖೆಗೆ ಆದೇಶಿಸಿ: ಸಿಎಂ ಡಿಕೆ.ಶಿವಕುಮಾರ್'ಗೆ HDK ಸವಾಲು

ಮತ ಕಳ್ಳತನದಿಂದಲೇ ಮೋದಿ ಪ್ರಧಾನಿಯಾಗಿದ್ದು, ಗೆಲ್ಲಲಾಗದ ರಾಜ್ಯಗಳಲ್ಲೂ BJP ಗೆಲುವು: ಅಭಿಜೀತ್ ದೀಪ್ಕೆ

ರಾಜ್ಯದ ಬಾಕಿ ಹಣದ ಬಗ್ಗೆ ನಿರ್ಮಲಾ ಸೀತಾರಾಮನ್ ಜೊತೆ ಚರ್ಚೆ: GST ಮಂಡಳಿ ಸಭೆ ಬಳಿಕ CM ಡಿಕೆ.ಶಿವಕುಮಾರ್ ಹರ್ಷ

ಉತ್ತರ ಭಾರತ ವ್ಯಕ್ತಿಯಿಂದ ಡಿಕೆಶಿ ಸಿಲುಕಿಸಲು ಯತ್ನ: ಸಚಿವ ಸತೀಶ್ ಜಾರಕಿಹೊಳಿ