ಪಿ. ಗೋವಿಂದರಾಜ್, ಶಿವಮೊಗ್ಗ 9739363071
ಬಡವನ ಕೋಪ ದವಡೆಗೆ ಮೂಲ. ಪ್ರೇಮಿಗಳ ಕೋಪ?
ವಿರಹದ ಪರಿತಾಪ!
ರಮಾ ವೆಂಕಟೇಶ, ಚಿಣ್ಯ
ಪುಟ್ಟರಾಜು ಮೇಷ್ಟ್ರು ಮಕ್ಕಳಿಗೆ ಪ್ರಶ್ನೆ ಕೇಳೋದಕ್ಕಿಂತ ಭಟ್ರಿಗೆ ಪ್ರಶ್ನೆ ಕೇಳೋದೆ ಜಾಸ್ತಿಯಲ್ಲ?
ಹೆಚ್ಚಿನ ಪ್ರಶ್ನೆಗಳು ವಯಸ್ಕರಿಗೆ
ಮಾತ್ರವಾಗಿರುವುದರಿಂದ!
ಮುಕುಂದ ಹೆರಕಲ್ಲ, ಗುಲ್ಬರ್ಗಾ 8277672321
ಫ್ಯಾಷನ್ ಡಿಸೈನರ್ ಮಧು ಹಾಗೂ
ಕ್ರೇಜಿಸ್ಟಾರ್ ರವಿಚಂದ್ರನ್ ಭೇಟಿ ಆದರೆ
ಹೇಗಿರುತ್ತೆ?
ಪ್ರೇಮಲೋಕ ಮತ್ತು ಫ್ಯಾಷನ್ ಲೋಕ ಮಿಲನವಾದಂತಿರುತ್ತೆ!
ರವೀಂದ್ರನಾಥ ಶಿ. ಯಡಹಳ್ಳಿ
ಬಾಗಲಕೋಟ
ಛಲದಂಕಮಲ್ಲನಿಗೂ ಮಾತಿನಮಲ್ಲನಿಗೂ ಇರುವ ವ್ಯತ್ಯಾಸವೇನು ಶಿವಾ?
ಯಡಿಯೂರಪ್ಪನಿಗೂ ಈಶ್ವರಪ್ಪನಿಗೂ ಇರುವಷ್ಟೇ ವ್ಯತ್ಯಾಸ!
- ಬಾಣಭಟ್ಟ