ಫ್ಯಾಷನ್ ಡಿಸೈನರ್ ಮಧು,
ಮುಖನೋಡದೆ ಪ್ರೀತಿಸುವುದು, ಕಾಮೆಂಟ್ ಓದದೇ ಲೈಕ್ ಮಾಡುವಷ್ಟೇ ಅವಿವೇಕ ಅಲ್ವಾ?
ಬೋರ್ಡ್ ನೋಡದೇ ಬಸ್ ಹತ್ತಿದಷ್ಟೇ ಅವಿವೇಕ!
ರಮಾ ವೆಂಕಟೇಶ, ಚಿಣ್ಯ
ಭಟ್ರೇ ಹಳ್ಳಿ ಜೀವನ ಚಂದಾನೋ ಸಿಟಿಲೈಫ್ ಚಂದಾನೋ?
ಹಳ್ಳೀಲಿದ್ದು ಆಗಾಗ ಸಿಟಿಗೆ ಬಂದುಹೋಗೋ ಲೈಫ್ ಚೆಂದ!
ಚೆಲುವಗೆಗೌಡ, ಮೇಲುಕೋಟೆ
ತಲೆಯಲ್ಲಿ ಅರ್ಧ ಕೂದಲು ಇಲ್ಲದ ಹಳ್ಳಿಮೇಷ್ಟ್ರು ಭಯಂಕರ ಪ್ರಣಯಪಾಠ ಮಾಡುತ್ತಿದ್ದಾನಲ್ಲ?
ಹಳ್ಳಿಮೇಷ್ಟ್ರೆ, ಹಳ್ಳಿಮೇಷ್ಟ್ರೆ ಪಾಠಮಾಡಿ ಬನ್ನಿ ಅಂತ ಯಾರೋ ಕರೆದಿರಬೇಕು!
ರವಿಕುಮಾರ ಜಿ.ಬಿ., 9449669897
ದೇಶದಲ್ಲಿ ಎಲ್ಲ ವಸ್ತುಗಳ ಬೆಲೆ ಏರಿಕೆ ಆಗುತ್ತದೆ. ದಿನಪತ್ರಿಕೆ ಏರಿಕೆ ಆಗುವುದಿಲ್ಲವಲ್ಲ?
ಸದ್ಯದಲ್ಲೇ ನಿರೀಕ್ಷಿಸಿ!
-ಬಾಣಭಟ್ಟ