ಹುಡುಗರಿಗೆ ಹುಡುಗಿಯರು ಹೂವಿಡಲೆಂದು ದೇವರು ಕೊಟ್ಟ ಒಂದು ಅಂಗ
ಕಿವಿ ಎಲ್ಲರಿಗೂ ಎರಡು, ಬಾಯಿ ಮಾತ್ರ ಒಂದೇ ಇರುತ್ತದೆ. ಕಾರಣ ಹೆಚ್ಚು ಕೇಳಿ ಕಡಿಮೆ ಮಾತನಾಡಲಿ ಎಂದು
ಗಂಡನಿಗೆ ಹೆಂಡತಿಯ ಉಪದೇಶ ಕೇಳಿಸಿಕೊಳ್ಳಲೆಂದು ಇರುವಂಥದ್ದು
ಹೆಂಡತಿಗೆ ಇದರ ಬಳಕೆ ಕಡಿಮೆ. ಹೆಂಗಸರಿಗೆ ಜಾಸ್ತಿ
ಗಂಡಸರ ಕಿವಿ ಕೆಲವೊಮ್ಮೆ ಹೆಂಡತಿ ಬೊಬ್ಬೆ ಹಾಕಿದರೂ ಕೇಳಿಸುವುದೇ ಇಲ್ಲ. ಅದೇ ಸುಂದರಿಯೊಬ್ಬಳು ಪಿಸುಗುಟ್ಟಿದರೂ ಕೇಳಿಸಿಬಿಡುತ್ತದೆ
ಮಂಥರೆಯಂಥವರಿಗೆ ಮತ್ತೊಬ್ಬರ ಮನಸ್ಸು ಮಥಿಸಲು ಇರುವ ಮಾಧ್ಯಮ
ತಲೆಯೊಳಗೆ ಹುಳ ಬಿಡುವವರಿಗೆಂದೇ ಇರುವ ದ್ವಾರ
ಓಲೆ ತೊಡಲೂ, ಓಲೈಸಲೂ ಇರುವಂಥ ಪ್ರತ್ಯಂಗ
ಬೆಂಗಳೂರಿನ ಜನರಿಗೆ ಇಯರ್ ಫೋನ್ ಸಿಕ್ಕಿಸಿಕೊಳ್ಳಲೆಂದೇ ಇರುವಂಥದ್ದು
ಕನ್ನಡಕದ ಆಧಾರ
ಅಂಧರ ಕಣ್ಣು
ಜಾಣರಿಗೆ ಜಾಣ ಕಿವುಡು ಪ್ರದರ್ಶಿಸಲು ಸಾಧ್ಯವಾಗುವುದು ಇದರಿಂದಲೇ
ವಿಶ್ವನಾಥ ಸುಂಕಸಾಳ