ಸಂಪಾದಕೀಯ

ತನ್ನನ್ನು ನಿಂದಿಸಿ ಬರೆದ ಪುಸ್ತಕಕ್ಕೆ ನೆರವು

ಡೆನಿಸ್ ಡಿಡಿರೋ ಹದಿನೇಳನೇ ಶತಮಾನದಲ್ಲಿದ್ದ ಪ್ರಸಿದ್ಧ ಫ್ರೆಂಚ್ ಲೇಖಕ. ರೂಸೋನ ಸಮಕಾಲೀನನಾದ ಈತ ಅನೇಕ ಮೌಲಿಕ ಕೃತಿಗಳನ್ನು ರಚಿಸಿ ಹೆಸರು ಗಳಿಸಿದ್ದಾನೆ. ಪ್ರಸಿದ್ಧ ಎನ್‌ಸೈಕ್ಲೋಪೀಡಿಯಾದ ರಚನೆ ಮಾಡಿದ ತತ್ವಜ್ಞಾನಿ. ಫ್ರೆಂಚ್ ಸಾಹಿತ್ಯಕ್ಕೆ ಮತ್ತು ತತ್ವಜ್ಞಾನಕ್ಕೆ ಡೆನಿಸ್ ಕೊಡುಗೆ ಅಪಾರ. ಅವನಿಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಂತೆ, ಅವನನ್ನು ದ್ವೇಷಿಸುವ ಸಾಹಿತಿಗಳ ದಂಡೂ ಸಾಕಷ್ಟಿತ್ತು. ಒಮ್ಮೆ ಅವನು ತನ್ನ ಕೊಠಡಿಯಲ್ಲಿ ಕುಳಿತು ಅಧ್ಯಯನದಲ್ಲಿ ತೊಡಗಿದ್ದಾಗ ಒಬ್ಬ ಯುವ ಬರಹಗಾರ ತಾನು ಬರೆದ ಒಂದು ಕೃತಿಯ ಹಸ್ತಪ್ರತಿಯನ್ನು ತಂದು ಡಿಡಿರೋನಿಗೆ ನೀಡಿ ಅದನ್ನೋದಿ ಅಭಿಪ್ರಾಯ ತಿಳಿಸುವಂತೆ ಕೇಳಿಕೊಂಡ. ಅದೊಂದು ಕಟುವಾದ ಶಬ್ದದಲ್ಲಿ ಡಿಡಿರೋವನ್ನು ನಿಂದಿಸಿ ಬರೆದ ಕೃತಿಯಾಗಿತ್ತು. ಅದನ್ನೋದಿ ಬೇಸರದಿಂದ "ನಿನ್ನ ಉದ್ದೇಶವಾದರೂ ಏನು?" ಎಂದು ಪ್ರಶ್ನಿಸಿದ. ಅದಕ್ಕೆ ಆ ಬರಹಗಾರ ಹೇಳಿದ, "ತಾವು ಬಹುದೊಡ್ಡ ಲೇಖಕರು. ನಿಮ್ಮನ್ನು ಕಂಡರೆ ಆಗದ ಅನೇಕ ಬರಹಗಾರರು ನಮ್ಮಲ್ಲಿದ್ದಾರೆ. ಅವರಿಗೆ ನಿಮ್ಮನ್ನು ನಿಂದಿಸಿ ಬರೆದರೆ ಸಂತೋಷವಾಗುವುದು. ಇದರಿಂದ ಅವರ ಸ್ನೇಹವೂ ಪ್ರಾಪ್ತವಾಗುವುದರ ಜೊತೆಗೆ ನನ್ನ ಪುಸ್ತಕಕ್ಕೆ ಹೆಚ್ಚಿನ ಪ್ರಚಾರ ದೊರೆಯುತ್ತದೆ."
 ಡಿಡಿರೋನಿಗೆ ಅವನ ಪುಸ್ತಕ ಪ್ರಚಾರ ಮಾಡಿಕೊಳ್ಳುವ ತಂತ್ರ ಮೆಚ್ಚುಗೆಯಾಯಿತು. ಅದರ ಪ್ರಕಟಣೆಗೆ ತಾನು ನೆರವಾಗುವುದಾಗಿ ತಿಳಿಸಿದ್ದಲ್ಲದೆ, ತನ್ನ ಕಡು ವಿರೋಧಿಯಾಗಿದ್ದ ಮಹಾಶಯರೊಬ್ಬರಿಗೆ ಈ ಕೃತಿಯನ್ನು ಚೆಂದದ ಮಾತುಗಳಲ್ಲಿ ಅಪರ್‌ಸಿಬಿಡು. ಅವರೇ ನಿನ್ನ ಪುಸ್ತಕ ಪ್ರಕಟಣೆಗೆ ನೆರವಾಗುತ್ತಾರೆ ಎಂಬ ಸಲಹೆಯನ್ನೂ ನೀಡಿದ. ಅದಕ್ಕೆ ಆ ಬರಹಗಾರ ಅವರಿಗೆ ಮೆಚ್ಚುಗೆಯಾಗುವಂತೆ ಸಮರ್ಪಣೆ ಬರೆಯಲು ತನಗೆ ಬರುವುದಿಲ್ಲವೆಂದೂ, ಡಿಡಿರೋರವರೇ ಅದನ್ನು ಬರೆದುಕೊಟ್ಟರೆ ತುಂಬಾ ಉಪಕಾರವಾಗುವುದೆಂದೂ ಮನವಿ ಮಾಡಿಕೊಂಡ. ಆಗ ಡಿಡಿರೋ ನಸುನಗುತ್ತಾ, ತಾವೇ ತಮ್ಮನ್ನು ನಿಂದಿಸಿ ಬರೆದ ಕೃತಿಯ ಅರ್ಪಣೆಯ ಸಾಲುಗಳನ್ನು ಸೊಗಸಾಗಿ, ಆಕರ್ಷಕವಾಗಿ ಬರೆದುಕೊಟ್ಟರು. ಅದನ್ನೋದಿದ ಅವರ ವಿರೋಧಿ ಮಹಾಶಯ, ತುಂಬಾ ಸಂತೋಷಪಟ್ಟು, ಆ ಕೃತಿಯ ಪ್ರಕಟಣೆಗೆ ಎಲ್ಲ ರೀತಿಯ ನೆರವನ್ನೂ ನೀಡಿದ!

 ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

Delhi CJP Protest: ಅಭಿಜೀತ್ ದೀಪ್ಕೆ, ಸೌರವ್ ದಾಸ್, ಆಶುತೋಷ್ ರಂಕಾ,ಯೂಟ್ಯೂಬರ್ ಧ್ರುವ್ ರಾಠಿ ಸೇರಿ 200ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ; Video

ಸ್ಟಾರ್‌ಲಿಂಕ್ ವಿವಾದ: ಭಾರತ ವಸಾಹತಲ್ಲ- Elon Musk ಗೆ ಕಮಲ್ ಹಾಸನ್ ತಿರುಗೇಟು

'ರಾಹುಲ್ ಗಾಂಧಿ ಅವರೇ, ನಿಮ್ಮ ಉದ್ದೇಶಗಳು ಎಂದಿಗೂ ಈಡೇರಲ್ಲ': ವಿಪಕ್ಷದವರದ್ದು 'ನಗರ ನಕ್ಸಲ್' ಮನಸ್ಥಿತಿ; ನಿತಿನ್ ನಬಿನ್

ಶಾಕಿಂಗ್ Video: CJP ಪ್ರತಿಭಟನೆ ತಡೆಯಲು ಬ್ಯಾರಿಕೇಡ್‌ ಮಾತ್ರವಲ್ಲ, ರಸ್ತೆಯಲ್ಲಿ ಸ್ಪೈಕ್ ಸ್ಟ್ರಿಪ್‌ ಅಳವಡಿಕೆ!