ಶ್ರೀಧರ ಡಿ. ರಾಮಚಂದ್ರಪ್ಪ, ಚಿತ್ರದುರ್ಗ, 9880791106
ಹಾವಿನ ದ್ವೇಷಕ್ಕೂ ಮನುಷ್ಯನ ದ್ವೇಷಕ್ಕೂ ವ್ಯತ್ಯಾಸವೇನು?
ಹಾವು ಕಚ್ಚುತ್ತದೆ, ಮನುಷ್ಯ ಕೊಚ್ಚುತ್ತಾನೆ!
ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ, 9449130531
ಕೆಲವು ಹೆಂಗಸರು ತಮ್ಮ ಪತಿಯ ಬಳಿ ಇರುವ ಮೊಬೈಲನ್ನು ಸವತಿ ಅಂತ ಕರೆಯುತ್ತಾರೆ ಯಾಕೆ?
ಗಂಡ ತನಗಿಂತ ಹೆಚ್ಚು ಮೊಬೈಲನ್ನೇ 'ಟಚ್' ಮಾಡುವುದರಿಂದ!
ನಾದೀಶ, ಚೆನ್ನಪಟ್ಟಣ
ಪವರ್ ಹೆಚ್ಚಾದರೆ ಏನಾಗುತ್ತದೆ?
ಫ್ಯೂಸ್ ಹಾರಬಹುದು ಹುಷಾರು.
ಹರಳಹಳ್ಳಿ ಪುಟ್ಟರಾಜು, 9632838088
ಪತಿ ಪತ್ನಿಯರು ಕೊಡಬಹುದಾದ ಬೆಸ್ಟ್ ಕೊಡುಗೆ?
ಪರಸ್ಪರರಿಗೆ ಏನು ನೀಡಿ ಬೆಸ್ಟ್ ಎನ್ನಿಸಿಕೊಳ್ಳಬಹುದು ಎಂಬುದಕ್ಕೆ ಸಂಶೋಧನೆಗಳು ಇನ್ನೂ ಜಾರಿಯಲ್ಲಿವೆ.
ಬಾಣಭಟ್ಟ