ಬಾಸ್‌ನ ಬೈಯ್ಗುಳ ಕೇಳಿಸಿಕೊಳ್ಳಲೆಂದೇ ಇರುವ ಶಾಪಗ್ರಸ್ತ ಅಂಗ
ಕವಿತಾ ವಾಚನವನ್ನು ಕೇಳುವ ಸಂದರ್ಭವೇ ಇದಕ್ಕೊದಗುವ ಮಹಾ ಶಿಕ್ಷೆ
ಕೇಳಿಸಿಕೊಳ್ಳುವುದೇ ಇದರ ಪಾಲಿನ 'ಕೇಳಿ'
ತಲೆ ತಿನ್ನುವ ಸ್ವಭಾವವಿರುವವರು ಶುರು ಮಾಡುವುದೇ ಕಿವಿ ಕಚ್ಚುವುದರಿಂದ
ಕಾವಿ ತೊಟ್ಟವರಿಗೆ ಬೇರೆಯವರ ಕಿವಿಯೇ ಸಂಪನ್ಮೂಲ
ಸಂಗೀತದ ಮೂಲಕ ನಿದ್ರಾ ಲೋಕಕ್ಕೆ ತೆರಳಲು ಇರುವ ಬಿಲ
ರಂಧ್ರಾನ್ವೇಷಣಾ ನಿರತರಿಗೆ ಪರದೋಷಗಳನ್ನು ಪರರಿಗೆ ವರ್ಗಾಯಿಸಲು ಇರುವ ದ್ವಾರ
ಯಾರಿಗೆ ಬೇಕಾದರೂ ಕಿವಿಗೊಡಬಹುದು. ಆದರೆ ಕುಕವಿಗಳಿಗೆ ಮಾತ್ರ ಉಹೂಂ..ಕೊಡಲೇಬಾರದು
ಸವಿಯನ್ನು ಕಿವಿಯಿಂದಲೂ ಅನುಭವಿಸಬಹುದು.
ಈಗಿನ ಪ್ರೊಫೆಸರ್‌ಗಳು ಬಯಸುವ ಗುರುದಕ್ಷಿಣೆಯೆಂದರೆ ಅದು ಕಿವಿಯೇ
ಕೆಲವರು 'ಕಿವಿಮಾತು' ಎಂಬ ಹೆಸರಿನಲ್ಲಿ ಆಡುವ ಮಾತಿಗೆ ಚಾಡಿ ಎನ್ನಬಹುದು.
-ವಿಶ್ವನಾಥ ಸುಂಕಸಾಳ
vishwasunkasal@yahoo.com