ಭುವನದ ಮಂದಿಯೆಲ್ಲರ ಮನದಾಳ
ಎಲ್ಲದಕ್ಕೂ 'ನೋ' ಅಥವಾ 'ಃಕ' ಎಂದರೆ ಅದು ನೇತ್ಯಾತ್ಮಕ/ನಕಾರಾತ್ಮಕ ಭಾವನೆ
ಎಲ್ಲದಕ್ಕೂ ಸರಿ ಸರಿ ಎಲ್ಲವೂ ಸರಿಯೇ ಆಗಲಿದೆ ಎಂಬ ಭಾವನೆ 'ಸ'ಕಾರಾತ್ಮಕ
ಬವಣೆ ಪಡಲು ಕಾರಣವಾದ ವಿಷಯ
ಮನುಷ್ಯ ಮಾನವನೆನಿಸಿಕೊಳ್ಳಲು ಕಾರಣವಾದ ಮನಸ್ಸಿನ ರೂಪ
ಹಲವು ಬೇನೆಗಳಿಗೆ ಕಾರಣವಾದದ್ದು ಈ ಭಾವನೆ
Soulಗೆ ಸಮನಾದದ್ದು ಈ Feel
ಅಕ್ಕನ ಮೇಲೆ ಬಾವನಿಗಿರುವ ಅಭಿಪ್ರಾಯ
ಭವದ ನೆಲೆಗಟ್ಟು, ಅನುಭವದ ಚೌಕಟ್ಟು
ಸತ್ವ ರಜಸ್ ತಮೋಗುಣಗಳ ಆಧಾರದಲ್ಲಿ ನಿರ್ಧಾರವಾಗುವಂಥದ್ದು
ಒಂದೊಂದು ವಸ್ತುವಿನ ಬಗೆಗೂ ಒಬ್ಬೊಬ್ಬರದೂ ಒಂದೊಂದು ಭಾವನೆ
ಭವ ಬಂಧನಕ್ಕೆ ಕಾರಣವೇ ಭಾವನೆ
ಎಲ್ಲ ಸಾಂಸಾರಿಕ ಕತೆಗಳ ಮೂಲ ಭಾವುಕತೆಯೇ
ಬೇರೆಯವರ ಭಾವನೆಯನ್ನೇ ಬಂಡವಾಳವಾಗಿಸಿಕೊಂಡವರನ್ನು ಭಾವನಾಶಾಹಿಗಳು ಎನ್ನಬಹುದು
ಭಾವನಾ ಲೋಕದಲ್ಲಿ ಬಡವರು ಶ್ರೀಮಂತರೆಂಬ ಭೇದವಿಲ್ಲ
-ವಿಶ್ವನಾಥ ಸುಂಕಸಾಳ
vishwasunkasal@yahoo.com